ಐಇಸಿ ಚಟುವಟಿಕೆ:ಉಪನ್ಯಾಸ

ಕಲಬುರಗಿ,ಜು 12: ಜೇವರಗಿ ತಾಲೂಕಿನ ನರಿಬೋಳ ಗ್ರಾಮ ಪಂಚಾಯತ್ ಹಾಗೂ ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಐಇಸಿ ಚಟುವಟಿಕೆಗಳ ಕುರಿತು ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಉಪನ್ಯಾಸ ಹಾಗೂ ಪ್ರಮಾಣ ವಚನ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಮಲ್ಲಣ್ಣ ಮ್ಯಾಗೇರಿ ಗ್ರಾಮದ ಅಭಿವೃದ್ಧಿಗಾಗಿ ಹಾಗೂ ಸ್ವಚ್ಛತೆಗಾಗಿ ಸರ್ವ ರೀತಿಯಿಂದಲೂ ಸಹಕರಿಸಲು ಸಿದ್ಧವೆಂದರು. ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲೆಯ ಮುಖ್ಯಗುರು ಹೇಮಲತ ಪತ್ತಾರ್ ಶೌಚಾಲಯವಿಲ್ಲದವರು ಶೌಚಾಲಯ ಕಟ್ಟಿಸಿಕೊಳ್ಳಿ, ಇದ್ದವರು ಅದರಲ್ಲಿ ಕಟ್ಟಿಗೆ, ಕುಳ್ಳ ಹಾಕುವುದು. ರೊಟ್ಟಿ ಬಡಿಯುವುದು ಬಿಟ್ಟು ಅವುಗಳನ್ನು ಪ್ರತಿನಿತ್ಯ ಬಳಸಬೇಕೆಂದರು. ಕೊನೆಯದಾಗಿ ಎಲ್ಲರೂ ಪ್ರಮಾಣವಚನವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಾಲಾ ಸಹ ಶಿಕ್ಷಕರು, ಮುಖ್ಯ ಅತಿಥಿಗಳಾದ ಗ್ರಾಂ. ಪಂ. ಮಾಜಿ ಅಧಿಕಾರಿ ಸಂಗನಗೌಡ ಸೋಮನಗೌಡ, ಈರಣ್ಣ ನಾಡಗೌಡ, ಸದಸ್ಯ ಶಿವಕುಮಾರ್ ಪಾಟೀಲ್, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಬಿಲ್ ಕಲೆಕ್ಟರ್ ಭೀಮಣ್ಣ ದಂಡೋತಿ,ಪಂಪ್ ಆಪರೇಟರ್ ಮರಲಿಂಗ ಭಂಡಾರಿ, ಮಿನಿ ವಾಟರ್ ಮ್ಯಾನ್ ದೌಲ್ ಸಾಬ್ ಹಸನ್ ಸಾಬ್, ಲಾಲ್ ಸಾಬ್ ಮೈಬೂಬ್ ಸಾಬ್ ಸೇರಿದಂತೆ ಅನೇಕರಿದ್ದರು.