ಏ24-25 ಕನ್ನಡ ಭವನ ಉದ್ಘಾಟನೆ

ಆನೇಕಲ್.ಏ.೧೧- ಮರಸೂರು ಗ್ರಾಮದಲ್ಲಿ ಏಪ್ರಿಲ್ ೨೪ ಮತ್ತು ೨೫ ರಂದು ನೂತನ ಕನ್ನಡ ಭವನ ಉದ್ಘಾಟನೆ ಮತ್ತು ಆನೇಕಲ್ ತಾಲ್ಲೂಕು ಮಟ್ಟದ ೪ ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನ ಆನೇಕಲ್ ತಾಲ್ಲೂಕು ಅಧ್ಯಕ್ಷ ನವೀನ್ ಕುಮಾರ್ ಬಾಬು ರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೪ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಜಿ.ಮುನಿರಾಜು ರವರನ್ನು ಆಯ್ಕೆಗೊಳಿಸಲಾಗಿದೆ, ೪ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ವಿವಿಧ ಗೋಷ್ಠಿಗಳು ಮತ್ತು ನಾಡಿನ ಸಂಸ್ಕೃತಿಯನ್ನು ಬಿಂಬಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಗಣ್ಯರು. ಸಾಹಿತಿಗಳು, ಬರಹಗಾರರು, ಕವಿಗಳು ಭಾಗವಹಿಸಲಿದ್ದು ಸಕಾಲಕ್ಕೆ ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠೀಯಲ್ಲಿ ಶಿಕ್ಷಣ ತಜ್ಞ ಜಿ.ಮುನಿರಾಜು, ಕನ್ನಡ ಸಾಹಿತ್ಯ ಪರಿಷತ್ ನ ಎಂ.ಆರ್.ಎಲ್ಲಪ್ಪ, ಆನಂದ್ ಕುಮಾರ್ ಮತ್ತಿತರು ಹಾಜರಿದ್ದರು.