ಏ. 8ರಂದು ಛಲವಾದಿ, ಬುದ್ದಿಸ್ಟ್ ವಧು-ವರರ ಸಮಾವೇಶ

ಕಲಬುರಗಿ,ಮಾ.27:ನಗರದ ಪಿಎಲ್‍ಡಿ ಬ್ಯಾಂಕ್ ಎದುರುಗಡೆ ಇರುವ ಹಿಂದಿ ಪ್ರಚಾರ ಸಭಾಂಗಣದಲ್ಲಿ ಏಪ್ರಿಲ್ 8ರಂದು ಬೆಳಿಗ್ಗೆ 11 ಗಂಟೆಗೆ ಛಲವಾದಿ, ಬುದ್ದಿಸ್ಟ್ ವಧು- ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಛಲವಾದಿ, ಬುದ್ದಿಸ್ಟ್ ವಧು- ವರರ ಮಾಹಿತಿ ಸೇವಾ ಸಂಘದ ಅಧ್ಯಕ್ಷ ಬಿ.ಎಲ್. ಬಿಜಾಸಪೂರಕರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಬಹುತೇಕ ಪರಿಶಿಷ್ಟ ಜಾತಿ ಸಮುದಾಯದವರು ಕೃಷಿ, ಕಾರ್ಮಿಕರು ಹಾಗೂ ಕಡು ಬಡವರಾಗಿದ್ದಾರೆ. ಅವರ ಉಪಜೀವನ ಸಾಗಿಸುವುದು ದುಸ್ತರವಾಗಿದೆ. ಸ್ವಾತಂತ್ರ್ಯಪೂರ್ವದ ಸಾಮಾಜಿಕ ಹಾಗೂ ಶೈಕ್ಷಣಿಕ ಮತ್ತು ಆರ್ಥಿಕ ಸಮಾನತೆಯನ್ನು ಪರಿಗಣಿಸಿ ಸಾಮಾಜಿಕ ನ್ಯಾಯ ಒದಗಿಸುವ ಹಾಗೂ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದ ಸಂವಿಧಾನ ನಿರ್ಮಾಪಕರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಶೈಕ್ಷಣಿಕ ಮತ್ತು ಉದ್ಯೋಗ ಇತರೆ ವಲಯಗಳಲ್ಲಿ ಮೀಸಲಾತಿ ನೀಡಿದ ಪ್ರಯುಕ್ತ ಸಮಾಜದ ಬಡ ಮಕ್ಕಳು ಉನ್ನತ ಮಟ್ಟದ ಪದವಿಗಳನ್ನು ಪಡೆದಿದ್ದಾರೆ ಎಂದರು.
ಎಂಬಿಬಿಎಸ್, ಎಂಡಿ, ಇಬಿ, ಇಂಟೆಕ್, ಬಿಎ, ಬಿಕಾಂ, ಬಿಎಸ್‍ಸಿಮ ಎಂಎಸ್‍ಸಿ, ಎಂಕಾಂ. ಎಂಎ ಮುಂತಾದ ಯೋಗ್ಯತೆಗೆ ಅನುಸಾರ ಪದವಿ ಪಡೆದ ವಧು ವರರಿಗೆ ತಮ್ಮ, ತಮ್ಮ ಸಂಗಾತಿಗಳ ಆಯ್ಕೆಗೆ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಪದವಿಗಳನ್ನು ಪಡೆದು ಉದ್ಯೋಗಸ್ಥರಾಗಿದ್ದರೂ ಸಹ ಅವರ ಶೈಕ್ಷಣಿಕ ಅರ್ಹತೆಗೆ ಯೋಗ್ಯತೆಗೆ ಅನುಗುಣವಾಗಿ ವಧು- ವರರಿಗೆ ತಕ್ಕವರು ಸಿಗದೇ ಇರುವುದರಿಂದ ಯೋಗ್ಯರಾದ ವಧು ಮತ್ತು ವರರ ಅನ್ವೇಷಣೆಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಸಂಘವು ಕಳೆದ ಮೂರು ವರ್ಷಗಳಿಂದ ಈ ದಿಸೆಯಲ್ಲಿ ಶ್ರಮಿಸುತ್ತಿದೆ. ಇದುವರೆಗೆ ಸಂಘದಲ್ಲಿ 564 ವಧು- ವರರು ನೊಂದಣಿ ಮಾಡಿಕೊಂಡಿದ್ದು, 300 ವರಗಳು ಹಾಗೂ 264 ವಧುಗಳು ಸೇರಿದ್ದಾರೆ. 300 ವರಗಳಲ್ಲಿ 60 ಹಾಗೂ ವಧುಗಳಲ್ಲಿ 58 ಮದುವೆಯಾಗಿವೆ. ಮರು ಮದುವೆ ಬಯಸುವವರೆಗೂ ಸಹ ಅನ್ವೇಷಣೆಗಾಗಿ ಅವಕಾಶ ಇದೆ ಎಂದು ಅವರು ತಿಳಿಸಿದರು.
ಸಮಾಜದಲ್ಲಿ ವಧುಗಳೇ ಹೆಚ್ಚಿನ ಉನ್ನತ ವ್ಯಾಸಂಗದ ಪದವಿ ಪಡೆದಿದ್ದು, ಅವರು ತಮಗಿಂತ ಕಡಿಮೆ ವ್ಯಾಸಂಗದವರಿಗೆ ಮದುವೆ ಆಗುತ್ತಿಲ್ಲ. ಇದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಆದ್ದರಿಂದ ಪಾಲಕರಿಗೆ ಈ ಕುರಿತು ತಿಳಿಹೇಳುವ ಕಾರ್ಯವನ್ನೂ ಸಹ ಸಂಘ ಮಾಡುತ್ತಿದೆ ಎಂದು ತಿಳಿಸಿದ ಅವರು, ಪರಿಶಿಷ್ಟ ಜಾತಿ (ಛಲವಾದಿ) ಸಮುದಾಯದ ಎಲ್ಲ ಮದುವೆಯ ವಯಸ್ಸಿನವರು ತಮ್ಮ ವೈಯಕ್ತಿಕ ಪರಿಚಯ ಹಾಗೂ ಇತ್ತೀಚಿನ ಭಾವಚಿತ್ರಗಳೊಂದಿಗೆ ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ಅವರು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9886428618, 9448127659, 8105904789, 9449309786, 8184381366ಗಳಿಗೆ ಸಂಪರ್ಕಿಸಲು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ವಿಠಲ್ ಕೆಂಭಾವಿ, ಶಿವಲಿಂಗಪ್ಪ ಕಲಕೇರಿ, ಕಾಳಪ್ಪ ಕೆಂಭಾವಿ, ಕೆ. ಪ್ರಕಾಶ್, ಶಿವಶಂಕರ್ ಪಟ್ಟಣಕರ್, ಚಂದ್ರಾಮ್ ಹುಬಳಿ, ಬಸಲಿಂಗಪ್ಪ ದೊಡ್ಡಮನಿ, ಮರಲಿಂಗಪ್ಪ ಗುಳಬಾಳ್ ಮುಂತಾದವರು ಉಪಸ್ಥಿತರಿದ್ದರು.