ಏ. 6 ರಂದು ಜಾತ್ರಾ ಮಹೋತ್ಸವ


ಧಾರವಾಡ,ಏ.1: ತಾಲೂಕಿನ ನರೇಂದ್ರ ಗ್ರಾಮದ ಮಳೆಪ್ಪಜ್ಜ ಹಾಗೂ ಮೌನಯೋಗಿ ಮಹಾಂತ ಶಿವಯೋಗಿಗಳ 65 ನೇ ಜಾತ್ರಾ ಮಹೋತ್ಸವದ ಭಜನಾ ಸಪ್ತಾಹ ಮಾ.30 ರಿಂದ ಆರಂಭವಾಗಿದೆ.
ಏ.6 ರಂದು ವೇ.ಮೂ.ದುಂಡಯ್ಯ ಸ್ವಾಮೀಜಿ ಹಾಗೂ ವೇ.ಮೂ. ಸಂಗಮೇಶ ಹಿರೇಮಠರ ಅವರ ನೇತೃತ್ವದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, 8 ಗಂಟೆಗೆ ಸಹಸ್ರ ಬಿಲ್ವಾರ್ಚನೆ, 7.15ಕ್ಕೆ ಕಳಸಾರೋಹಣ, ಬೆಳಗ್ಗೆ 9 ಗಂಟೆಗೆ ಸಪ್ತಾಹ ಮಂಗಲ. ಬೆಳಗ್ಗೆ 10 ಗಂಟೆಗೆ ಗಣಾರಾಧನೆ, 11 ಗಂಟೆಯಿಂದ ಪ್ರಸಾದ ವಿತರಣೆ ಆರಂಭ ಮತ್ತು ಮೈಲಾರಲಿಂಗನ ಪವಾಡಗಳು ನಡೆಯಲಿವೆ. ಮಧ್ಯಾಹ್ನ 3 ಗಂಟೆಗೆ ಗ್ರಾಮದೇವಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಸಂಜೆ 5 ಗಂಟೆಗೆ ಮಹಾ ರಥೋತ್ಸವ ಜರುಗಲಿದೆ. ಏ.6 ರಿಂದ 10 ವರೆಗೆ ಭಾರಿ ಜಂಗಿ ಕುಸ್ತಿ ನಡೆಯಲಿವೆ.
ಏ.8 ರಂದು ರಾತ್ರಿ 10.30ಕ್ಕೆ ಗ್ರಾಮದ ಮಹಾಂತೇಶ್ವರ ನಾಟ್ಯ ಸಂಘದ ಕಲಾವಿದರಿಂದ ‘ಉತ್ತಮರ ಮನೆತನ’ ನಾಟಕ ಪ್ರದರ್ಶನವಾಗಲಿದೆ. ಏ.10 ರಂದು ಸಾಯಂಕಾಲ 6 ಗಂಟೆಗೆ ಕಳಸಾವರೋಹಣ ನಡೆಯಲಿದೆ. ನಂತರ ಕಡಬಿನ ಕಾಳಗದ ಮುಖಾಂತರ ಜಾತ್ರಾ ಮಹೋತ್ಸವ ಮುಕ್ತಾಯವಾಗಲಿದೆ.
ಆದ್ದರಿಂದ ಸುತ್ತಲಿನ ಗ್ರಾಮಗಳ ಸಕಲ ಭಕ್ತರು ಮಠದಲ್ಲಿ ಜರುಗುವ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಮಳೆಪ್ಪಜ್ಜನ ಮಠದ ಟ್ರಸ್ಟ್ ಕಮೀಟಿ ಪ್ರಕಟಣೆಯಲ್ಲಿ ಕೋರಿದೆ.