ಏ.5 ರವರೆಗೆ ಸಿದ್ಧೇಶ್ವರಶಾಸ್ತ್ರಿಗಳಿಂದ ಪುರಾಣ

ಕಲಬುರಗಿ,ಮಾ 25: ಅಳಂದ ತಾಲೂಕಿನ ಆಲೂರ ( ಬಿ) ಗ್ರಾಮದ ಆರಾಧ್ಯ ದೇವರಾದ ಜೈಹನುಮಾನ ದೇವರ ಜಾತ್ರಾ ಮಹೋತ್ಸವ ಹಾಗೂ ನೂತನ ಶಿಖರ,ಹಾಗೂ ದ್ವಾರ ಉದ್ಘಾಟನೆಯ ನಿಮಿತ್ತ ಮಾ 22 ರಿಂದ ಆರಂಭವಾದ ಪುರಾಣ ಕಾರ್ಯಕ್ರಮ ಏ. 5 ರವರೆಗೆ ನಡೆಯಲಿದೆ.ಪ್ರತಿದಿನ ರಾತ್ರಿ 8 ಗಂಟೆಗೆ ಸಿದ್ಧೇಶ್ವರಶಾಸ್ತ್ರೀಗಳು ಹಿರೇಮಠ ಸುಂಟನೂರ ಅವರಿಂದ ಷಡಕ್ಷರಯ್ಯಸ್ವಾಮಿ ಪಲ್ಲಾಪೂರಮಠ ಕಲಬುರಗಿ ವಿರಚಿತ ಸಾವಳಗಿ ಶಿವಲಿಂಗೇಶ್ವರ ಪುರಾಣ ನಡೆಯಲಿದೆ.ಕಾರ್ಯಕ್ರಮಕ್ಕೆ ಮಠಾಧೀಶರು,ರಾಜಕೀಯಗಣ್ಯರು, ಸಂಗೀತ ಕಲಾವಿದರು ಆಗಮಿಸುವರು ಎಂದು ಜೈಹನುಮಾನ ಸೇವಾ ಸಮಿತಿಯವರು ತಿಳಿಸಿದ್ದಾರೆ.