ಏ.30 ಕ್ಕೆ ಉಚಿತ ಸಾಮೂಹಿಕ ವಿವಾಹ ಮಹೋತ್ಸವ

ದಾವಣಗೆರೆ.ಮಾ.೨೭: ಭಾರತರತ್ನ ಡಾ. ಅಂಬೇಡ್ಕರ್ ರವರ 132, ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂರವರ 116ನೇ ಜನ್ಮ ದಿನ, ಮತ್ತು ಬಹುಜನ ಸಮಾಜ ಸೇವಾ ಸಂಘದ ಐದನೇ ವಾರ್ಷಿಕೋತ್ಸವ ಅಂಗವಾಗಿ ಏ. 30 ರಂದು ಶಿವಯೋಗಿ ಮಂದಿರದಲ್ಲಿ ಸರ್ವ ಧರ್ಮಿಯರ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಬಹುಜನ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ. ಆಂಜನೇಯ ತಿಳಿಸಿದರು.ಸುದ್ದಿಗೋಷ್ಠಿ‌ಯಲ್ಲಿ ಈ ವಿಷಯ ತಿಳಿಸಿದ ಅವರು, ಈ ವರ್ಷ 25 ಜೊತೆ ಮದುವೆ ಮಾಡಲಾಗುವುದು.‌ ಈವರೆಗೆ 10 ಜೋಡಿಗಳ ನೋಂದಣಿ ಆಗಿದೆ ಎಂದು ತಿಳಿಸಿದರು.ಅಂದು ಮಧ್ಯಾಹ್ನ 12.30ಕ್ಕೆ ನಡೆಯುವ ಸಮಾರಂಭದಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಷಡಕ್ಷರಿಮುನಿ ಸ್ವಾಮೀಜಿ,  ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.ಸಂಸದ ಡಾ.ಜಿ.ಎಂ. ಸಿದ್ದೇಶ್ವರ, ಶಾಸಕ ಶಾಮನೂರು ಶಿವಶಂಕರಪ್ಪ, ಪ್ರೊ. ಎನ್. ಲಿಂಗಣ್ಣ, ಮಾಜಿ ಸಚಿವ ಎಸ್‌. ಎಸ್.  ಮಲ್ಲಿಕಾರ್ಜುನ್, ಮಾಜಿ ಶಾಸಕ ಎಚ್.ಎಸ್‌. ಶಿವಶಂಕರ್ ಇತರರು ಭಾಗವಹಿಸುವರು ಎಂದು ತಿಳಿಸಿದರು.ಮೇಯರ್ ವಿನಾಯಕ ಪೈಲ್ವಾನ್, ಉಪ ಮೇಯರ್ ಯಶೋಧಾ ಹೆಗ್ಗಪ್ಪ, ದೂಡಾ ಅಧ್ಯಕ್ಷ ಎ.ವೈ. ಪ್ರಕಾಶ್, ಮಾಜಿ ಅಧ್ಯಕ್ಷ ದೇವರಮನೆ ಶಿವಕುಮಾರ್ ಇತರರು ಪಾಲ್ಗೊಳ್ಳುವರು ಎಂದು ತಿಳಿಸಿದರು. ಸುದ್ದಿಗೋಷ್ಠಿ‌ಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್. ನಾಗೇಶ್, ಎಚ್. ರಾಜಾನಾಯ್ಕ, ಓಬಣ್ಣ, ಕುಬೇರಪ್ಪ, ಹನುಮಂತಪ್ಪ ಹಿಂಡಸಘಟ್ಟ ಇತರರಿದ್ದರು.