ಏ.29 ರಂದು ತಾಳಿಕೋಟೆಯಲ್ಲಿ ಐಐಟಿ, ನೀಟ್ ಆಕಾಂಕ್ಷಿ ಗಳಿಗೆ ಸುಕೃತಿ ಜೀನಿಯಸ್ ಸ್ಟೂಡೆಂಟ್ ಅವಾರ್ಡ ಪರೀಕ್ಷೆ

ತಾಳಿಕೋಟೆ:ಎ.26: ಹುಬ್ಬಳ್ಳಿಯ ಸುಕೃತಿ ಪಿಯು ಸೈನ್ಸ್ ಕಾಲೇಜ ವತಿಯಿಂದ ಪಿಯುಸಿ ಪ್ರಥಮ ವರ್ಷದ ವಿಜ್ಞಾನ ವಿಭಾಗಕ್ಕೆ ಪ್ರವೇಶಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಮೇರಿಟ್ ಆದಾರಿತ ಸುಕೃತಿ ಸ್ಕಾಲರ್ ಶಿಪ್ ನಿಡುತ್ತಿದ್ದಾರೆ. ಅದರ ಅಂಗವಾಗಿ ಏ.29 ರಂದು ತಾಳಿಕೋಟಿಯ ವಿಕಾಸ್ ಪಬ್ಲಿಕ್ ಸ್ಕೂಲ್ ನಲ್ಲಿ ಜೀನಿಯಸ್ ಸ್ಟೂಡೆಂಟ್ ಅವಾರ್ಡ -2023 ಪರೀಕ್ಷೆಯನ್ನು ಆಯೋಜಿಸಲಾಗಿದೆ ಎಂದು ಸುಕೃತಿ ಪಿಯು ಸೈನ್ಸ್ ಕಾಲೇಜಿನ ಪ್ರಾಚಾರ್ಯ ಜಗದೀಶ ಶೆಟ್ಟರ ಅವರು ತಿಳಿಸಿದರು.

    ಮಂಗಳವಾರರಂದು ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಈ ಸ್ಪರ್ಧೆಯು ಪ್ರಸಕ್ತ ಸಾಲಿನಲ್ಲಿ 10 ನೇ ತರಗತಿ ಪರೀಕ್ಷೆ ಬರೆದಿರುವ ಸ್ಟೇಟ್ ಸಿಲೆಬಸ್, ಸಿಬಿಎಸ್‍ಇ, ಐಸಿಎಸ್‍ಇ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬಹುದಾಗಿದೆ. ಪರೀಕ್ಷೆಯಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯದ ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳ ಪ್ರಶ್ನೆಪತ್ರಿಕೆಯಿರುತ್ತದೆ. ಸ್ಪರ್ಧೆಯಲ್ಲಿ ಅತೀ ಹೆಚ್ಚು ಅಂಕಗಳಿಸುವ ಪರೀಕ್ಷಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಪ್ರಥಮ ಬಹುಮಾನ 10,000 ರೂ. ಎರಡನೇ ಬಹುಮಾನ 5,000 ರೂ, ಮೂರನೇ ಬಹುಮಾನ 2,500 ರೂ. ಹಾಗೂ ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ನೀಡಲಾಗುವುದು. ಅಷ್ಟೇ ಅಲ್ಲದೇ ಇದೇ ಪರೀಕ್ಷೆಯನ್ನು ಪ್ರಥಮ ಪಿಯುಸಿ ವಿಜ್ಞಾನ ವಿಭಾಗಕ್ಕೆ ಪ್ರವೇಶಾತಿ ಪರೀಕ್ಷೆಯೆಂದು ಪರಿಗಣಿಸಲಾಗುವುದು ಎಂದು ಸುಕೃತಿ ಪಿಯು ಸೈನ್ಸ್ ಕಾಲೇಜಿನ ಪ್ರಾಚಾರ್ಯ ಜಗದೀಶ ಶೆಟ್ಟರ ಅವರು ತಿಳಿಸಿದರು.
   ಸುಕೃತಿ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಇಂಟಿಗ್ರೇಟೆಡ್ ಜೆ.ಇ.ಇ ನೀಟ್ ತರಬೇತಿಯ ಯೋಜನೆಯನ್ನು ಹೊಂದಿದ್ದು, ವಿದ್ಯಾರ್ಥಿಗಳು ತಮ್ಮ ಪಿ.ಯು.ಸಿ ಪ್ರಥಮ ಪ್ರಯತ್ನದಲ್ಲಿಯೇ ಜೆ.ಇ.ಇ ನೀಟ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಎನ್.ಐ.ಟಿ ಗಳಿಗೆ ಪ್ರವೇಶ ದೊರಕಿಸುವ ನಿಟ್ಟಿನಲ್ಲಿ 2 ವರ್ಷದ ವಿಶೇಷ ತರಬೇತಿ ಯೋಜನೆಯನ್ನು ಹೊಂದಿರುತ್ತದೆ. ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಸ್ಪರ್ಧಾತ್ಮಕ ಪರೀಕ್ಷೆಯನ್ನು ಏ.29 ರಂದು ಶನಿವಾರ ಬೆಳಗ್ಗೆ 11 ರಿಂದ 12: 10 ರವರೆಗೆ ತಾಳಿಕೋಟಿ ವಿಕಾಸ್ ಪಬ್ಲಿಕ್ ಸ್ಕೂಲ್ ನ ಆವರಣದಲ್ಲಿ ನಡೆಯಲಿದೆ. ಹೆಸರು ನೋಂದಾಯಿಸಲು ವಿದ್ಯಾರ್ಥಿ ಹೆಸರು, ವರ್ಗ, ಶಾಲೆಯ ಹೆಸರು, ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ 8867336682 ನಂಬರ್ ಗೆ ಎಸ್.ಎಂ,ಎಸ್ ಮಾಡಿ ಹೆಚ್ಚಿನ ಮಾಹಿತಿಗಾಗಿ ಮೊ.9972045678, 8867336682 ನಂಬರ್ ಗೆ ಸಂಪರ್ಕಿಸಲು ಕೋರಲಾಗಿದೆ. ಎಸ್.ಎಸ್.ಎಲ್ ಸಿ. ಪರೀಕ್ಷೆಯ ಪ್ರವೇಶ ಪತ್ರದೊಂದಿಗೆ ಪರೀಕ್ಷೆಗೆ ಹಾಜರಾಗಬೇಕು. ಪ್ರತಿಬಾವಂತ ವಿದ್ಯಾರ್ಥಿಗಳಿಗೆ ಸುಕೃತಿ ಸ್ಕಾಲರ್ ಶಿಪ್ ಯೋಜನೆಯ ಮೂಲಕ ಕಾಲೇಜು ಪ್ರವೇಶಾತಿ ಶುಲ್ಕದಲ್ಲಿ ವಿನಾಯತಿ ನಿಡಲಾಗುವುದು. ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳು ಸಿಇಟಿ, ನೀಟ್, ಐಐಟಿ ಪರೀಕ್ಷೆಗಳಲ್ಲಿ ಉತ್ತಮ ರಾಂಕ್ ಪಡೆದು ದೇಶದ ಪ್ರತಿಷ್ಠಿತ ಕಾಲೇಜುಗಳಲ್ಲಿ ಮೆಡಿಕಲ್, ಇಂಜಿನಿಯರಿಂಗ ನಂತಹ ಉನ್ನತ ಶಿಕ್ಷಣ ಪಡೆಯಬೇಕು. ಅದಕ್ಕಾಗಿ ಸುಕೃತಿ ಪಿಯು ಸೈನ್ಸ್ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ ಎಂದು ಸುಕೃತಿ ಸಂಸ್ಥೆಯ ಆಡಳಿತ ಮಂಡಳಿಯವರು ತಿಳಿಸಿದ್ದಾರೆಂದು ಅವರು ತಿಳಿಸಿದರು.

ಐಐಟಿಯಲ್ಲಿ ಸಾಧನೆ : ಸುಕೃತಿ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳು ಐಐಟಿ ಪರೀಕ್ಷೆಯಲ್ಲಿ ಉತ್ತಿರ್ಣರಾಗಿದ್ದಾರೆ.

ನೀಟ್ ಸಾಧನೆ: ಸುಕೃತಿ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾದನೆ ಮಾಡಿದ್ದಾರೆ.ನೂರಾರು ವಿದ್ಯಾರ್ಥಿಗಳು ಎಂ,ಬಿ.ಬಿ.ಎಸ್. ಪದವಿ ಅದ್ಯಯನ ಮಾಡುತ್ತಿದ್ದಾರೆ.ಪ್ರಸಕ್ತ ಸಾಲಿನಲ್ಲಿ ದ್ವೀತಿಯ ಪಿ.ಯು ಪರೀಕ್ಷೆಯಲ್ಲಿ 96% ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ನೀಟ್ ಹಾಗೂ ಐ ಐಟಿ ಪರೀಕ್ಷಗಳಲ್ಲಿ ಅತ್ಯುತ್ತಮ ಪಲಿತಾಂಶ ಪಡೆಯುವ ನೀರಿಕ್ಷೆ ಇದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆಂದು ಸುಕೃತಿ ಪಿಯು ಸೈನ್ಸ್ ಕಾಲೇಜಿನ ಪ್ರಾಚಾರ್ಯ ಜಗದೀಶ ಶೆಟ್ಟರ ಅವರು ತಿಳಿಸಿದರು.