ಏ.28 ನಗರದಲ್ಲಿ ರಾಹಲ್ ರೋಡ್ ಷೋ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.25: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು  ಚುನಾವಣಾ ಪ್ರಚಾರಕ್ಕಾಗಿ  ಏ. 28ರಂದು ನಗರಕ್ಕೆ ಆಗಮಿಸುತ್ತಿದ್ದಾರೆ.‌
ಅಂದು ಸಂಜೆ 5 ರಿಂದ ಗ್ರಾಮೀಣ ಕೇತ್ರ ವ್ಯಾಪ್ತಿಯ ಕೌಲ್ ಬಜಾರ್ ನ ಮೇನ್ ರೋಡ್ ಮೂಲಕ  ನಗರ ಕ್ಷೇತ್ರದ ಹೆಚ್. ಆರ್.  ಗವಿಯಪ್ಪ ವೃತ್ತದ ವರೆಗೆ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.‌
ರಾಹುಲ್ ಅವರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು, ಮುಖಂಡರು, ಭಾಗವಹಿಸಲಿದ್ದಾರಂತೆ.