ಏ.26ರ ಮತದಾನಕ್ಕೆ ಸಕಲ ಸಿದ್ಧತೆ

ಸಂಜೆವಾಣಿ ನ್ಯೂಸ್
ಮೈಸೂರು: ಏ.24:- ಲೋಕಸಭಾ ಚುನಾವಣೆ ಸಂಬಂಧ ಮೈಸೂರು-ಕೊಡಗು ಕ್ಷೇತ್ರದಲ್ಲಿ ಮತದಾನಕ್ಕೆ 48 ಗಂಟೆ ಬಾಕಿ ಇದ್ದು, ಯಾವುದೇ ಗೊಂದಲವಿಲ್ಲದೇ ನಿರ್ಭೀತಿಯಿಂದ ಮತದಾರರು ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.
ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಎರಡು ದಿನ ಬಾಕಿ ಇದ್ದು, ಏ.26ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 20,92,222 ಒಟ್ಟು ಮತದಾರರಿದ್ದು, ಈ ಪೈಕಿ 1026324 ಪುರುಷರು ಮತದಾರರಿದ್ದರೆ, 1065714 ಮಹಿಳೆಯರಿದ್ದಾರೆ. 184 ಮಂದಿ ಲಿಂಗತ್ವ ಅಲ್ಪಸಂಖ್ಯತಾ ಮತದಾರರಿದ್ದು, ಕ್ಷೇತ್ರದಲ್ಲಿ ಒಟ್ಟು 2202 ಮತಗಟ್ಟೆಗಳನ್ನ ಸ್ಥಾಪನೆ ಮಾಡಲಾಗಿದೆ. ಈ ಎಲ್ಲಾ ಕೇಂದ್ರಗಳಿಗೂ 9809 ಮತಗಟ್ಟೆ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ವಿವರಿಸಿದರು.
473 ಬಸ್ ವ್ಯವಸ್ಥೆ: ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಗೆ ಮತ್ತು ಮತಗಟ್ಟೆಯಿಂದ ಮಸ್ಟರಿಂಗ್ ಕೇಂದ್ರಕ್ಕೆ ಮತಯಂತ್ರ ಹಾಗೂ ಸಿಬ್ಬಂದಿಯನ್ನು ಕರೆದೊಯ್ಯಲು 473 ಕೆಎಸ್‍ಆರ್‍ಟಿ ಬಸ್‍ಗಳು, 33 ಜೀಪ್ ಹಾಗೂ 79 ಮಿನಿ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಕೇತ್ರದಲ್ಲಿ ಮಡಿಕೇರಿ, ವೀರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದರಂತೆ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರ ತೆರೆಯಲಾಗಿದೆ ಎಂದು ತಿಳಿಸಿದರು.
7ರಿಂದ 6ರವರೆಗೆ ಮತದಾನ: ಏ.26ರಂದು ಶುಕ್ರವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಮುಂಜಾನೆ 5.40ರಿಂದ 90 ನಿಮಿಷಗಳವರೆಗೆ ಅಣಕು ಮತದಾನ ಪ್ರಕ್ರಿಯೆ ನಡೆಯಲಿದೆ. ಒಂದು ವೇಳೆ ಸಂಜೆ ಆರು ಗಂಟೆಯ ನಂತರವೂ ಮತದಾನ ಮುಗಿಯದೇ, ಮತದಾರರು ಮತಗಟ್ಟೆ ಬಳಿ ಸರತಿಯಲ್ಲಿದ್ದರೆ, ಅಂತಹವರಿಗೆ ಟೋಕನ್ ನೀಡಿ 7 ಗಂಟೆಯವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಎಡಗೈ ತೋರು ಬೆರಳಿಗೆ ಶಾಹಿ: ಈ ಬಾರಿ ಮತದಾನ ಮಾಡಿದ ಮತದಾರನ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗುತ್ತಿದೆ. ಒಂದು ವೇಳೆ ತೋರು ಬೆರಳಿಲ್ಲದವರಿಗೆ ಅದರ ಪಕ್ಕದ ಬೆರಳಿಗೆ ಹಾಕಲಾಗುವುದು. ಅಂಗೈ ಇಲ್ಲದವರಿಗೆ ತೋಳಿಗೆ ಶಾಹಿ ಹಾಕಬಹದು. ಎಡಗೈ ಇಲ್ಲದ ವ್ಯಕ್ತಿಗೆ ಬಲಗೈ ತೋರು ಬೆರಳಿಗೆ ಅಥವಾ ಎರಡೂ ಕೈಗಳಿಲ್ಲದಿದ್ದರೆ ಕಾಲು ಬೆರಳಿಗೆ ಶಾಹಿ ಹಾಕಲಾಗುತ್ತಿದೆ ಎಂದರು.
ಮತಗಟ್ಟೆಗಳಲ್ಲಿ ಸಿಸಿ ಕ್ಯಾಮೆರಾ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ 2202 ಮತಗಟ್ಟೆಗಳಲ್ಲೂ ಈ ಬಾರಿ ಸಿಸಿ ಕ್ಯಾಮೆರಾ ಕಣ್ಗಾವಲು ಇರಿಸಲಾಗಿದೆ. ಜತೆಗೆ 2202 ಮತಗಟ್ಟೆಗಳ ಪೈಕಿ 435 ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, 41 ಮತಗಟ್ಟೆಗಳನ್ನು ವಲ್ನರವೆಲ್ ಎಂದು ಗುರುತಿಸಲಾಗಿದೆ. 495 ಮತಗಟ್ಟೆಯನ್ನು ಮೈಕ್ರೋ ಅಬ್ಸರ್ವರ್ ಎಂದು ಗುರುತು ಮಾಡಲಾಗಿದೆ ಎಂದು ತಿಳಿಸಿದರು.
63 ವಿಶೇಷ ಮತಗಟ್ಟೆ: ಮತಗಟ್ಟೆಗಳಿಗೆ ಮತದಾರರನ್ನು ಆಕರ್ಷಿಸುವ ಸಲುವಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5ರಂತೆ 40 ಸಖಿ ಬೂತ್‍ಗಳು ಇರಲಿವೆ. ಇದರ ಜತೆಗೆ 02 ಸಾಂಪ್ರದಾಯಿಕ ಮತಗಟ್ಟೆ, 08 ದಿವ್ಯಾಂಗ ಮತಗಟ್ಟೆ, 08 ಯುವ ಮತದಾರರ ಬೂತ್‍ಗಳು ಹಾಗೂ 07 ವಿಷಯಾಧರಿತ ಬೂತ್ ತೆರಯಲಾಗುತ್ತಿದೆ ಎಂದರು.
ಮೂಲಭೂತ ಸೌಲಭ್ಯಕ್ಕೆ ಕ್ರಮ: ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪೂರಕಾವಗಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಡಿಕೊಡಲಾಗಿದೆ. ಅಲ್ಲದೇ ಮತಗಟ್ಟೆಗೆ ಬರುವ ಮತದಾರರು ಬಿಸಿಲಿನಲ್ಲಿ ನಿಲ್ಲದಂತೆ ನೆರಳಿನ ವ್ಯವಸ್ಥೆ ಮಾಡಲಾಗುತ್ತಿದ್ದು, ಯಾವುದೇ ಗೊಂದಲ ಏರ್ಪಡದಂತೆ ಪೆÇಲೀಸ್ ಭದ್ರತೆ ಮಾಡಲಾಗಿದೆ ಎಂದರು.
ಅಂಗವಿಕಲರು ಮತ್ತು ಹಿರಿಯ ನಾಗರೀಕರು ಮತಗಟ್ಟೆಗೆ ಬರಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಮತಗಟ್ಟೆಗಳಿಗೂ ವ್ಹೀಲ್‍ಚೇರ್ ಹಾಗೂ ಬೂತಗನ್ನಡಿ ನೀಡಲಾಗಿದೆ. ದೃಷ್ಟಿ ದೋಷವುಳ್ಳವರಿಗೆ ಸಹಾಯವಾಗಲು ಬ್ರೈಲ್ ಬ್ಯಾಲೆಟ್ ಪೇಪರ್ ಸಹ ಮತಗಟ್ಟೆಗೆ ರವಾನೆ ಮಾಡಲಾಗಿದೆ ಎಂದರು.
105 ಎಫಐಆರ್ ದಾಖಲು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಜಿಲ್ಲೆಯಲ್ಲಿ ಒಟ್ಟು 105 ಎಫಐಆರ್ ದಾಖಲಾಗಿದೆ. ಈ ಪೈಕಿ ಚುನಾವಣಾ ವೆಚ್ಚ ಸಂಬಂಧ 2 ಎಫ್‍ಐಆರ್ ,ಅಬಕಾರಿ ಕಾಯ್ದೆ ಉಲ್ಲಂಘನೆಯಡಿ 103 ಎïಐಆರ್‍ಗಳು ದಾಖಲು ಮಾಡಲಾಗಿದೆ. ಈವರೆಗೆ 2,14,76,533 ನಗದು ವಶಪಡಿಸಿಕೊಳ್ಳಲಾಗಿದೆ. 1,08,65,72,850 ರೂಪಾಯಿ ಮೌಲ್ಯದ 1,25,54,191.41 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. 1,27,850 ಮೌಲ್ಯದ 4.894 ಕೆ.ಜಿ ಮತ್ತು 2,85,000 ರೂಪಾಯಿ ಮೌಲ್ಯದ 46.4 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ 1,80,900 ರೂಪಾಯಿ ಮೌಲ್ಯದ ಚುನಾವಣಾ ಪ್ರಚಾರ ಸಾಮಗ್ರಿಗಳು ವಶಕ್ಕೆ ಪಡದಿದÉೀವೆ ಎಂದು ವಿವರಿಸಿದರು.
ವೋಟರ್ ಸಿಲಿಟೇಷನ್ ಸೆಂಟರ್‍ನಲ್ಲಿ ಮತದಾನ: ಚುನಾವಣಾ ಕರ್ತವ್ಯದಲ್ಲಿ ನಿರತರಾದ ಮತದಾರರು ಮತದಾನ ಮಾಡಲು ಈ ಬಾರಿ ಚುನಾವಣಾ ಆಯೋಗ ಫಾರಂ 18ಎ ಭರ್ತಿ ಮಾಡಿದವರಿಗೆ ಅಂಚೆ ಮತಪತ್ರ ನೀಡುತ್ತಿದ್ದು, ಅವರು ರಿಜಿಸ್ಟರ್ ಪೆÇೀಸ್ಟ್ ಮಾಡದೇ ನಿಗದಿ ಪಡಿಸಿದ ವೋಟರ್ Éಸಿಲಿಟೇಷನ್ ಸೆಂಟರ್‍ನಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಹೆಚ್ಚು ಜನರಿಗೆ ತಿಳಿಯದ ಹಿನ್ನೆಲೆ ಪೆÇೀಸ್ಟಲ್ ಬ್ಯಾಲೆಟ್ ಮತದಾನ ಕಡಿಮೆಯಾಗಿತ್ತು. ಈ ಹಿನ್ನೆಲೆ ಏ.25ರ ಗುರುವಾರ ಮಧ್ಯಾಹ್ನ 12 ಗಂಟೆಯವರೆಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸದ್ಯಕ್ಕೆ 8423 ಮಂದಿಗೆ ಅಂಚೆ ಮತಪತ್ರ ನೀಡಲಾಗಿದ್ದರೆ, 8307 ಮಂದಿಗೆ ನಮೂನೆ ಇಡಿಸಿ ನೀಡಲಾಗಿದೆ. ಇಡಿಸಿ ಹೊಂದಿರುವ ಮತದಾರರು ತಾವು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ನಾಳೆ ಬಹಿರಂಗ ಪ್ರಚಾರ ಅಂತ್ಯ: ಲೋಕಸಭಾ ಚುನಾವಣೆ ಹಿನ್ನೆಲೆ ಏ.26ರಂದು ಮತದಾನ ನಡೆಯಲಿದ್ದು, ಮತದಾನ ಅಂತ್ಯಗೊಳ್ಳುವುದಕ್ಕೆ ನಿಗದಿಯಾಗಿರುವ ಸಮಯದ 48 ಗಂಟೆಗಳ ಮೊದಲು ಎಲ್ಲಾ ರೀತಿಯ ಚುನಾವಣಾ ಬಿಹಿರಂಗ ಪ್ರಚಾರ ನಿಷೇಧಿಸಲಾಗಿದೆ. ಈ ಹಿನ್ನೆಲೆ ಬುÀವಾರ ಸಂಜೆ 6 ಗಂಟೆಯ ನಂತರ ಯಾವುದೇ ಚುನಾವಣೆ ಪ್ರಚಾರ, ಸÉ, ಸಮಾರಂ`À ಮಾಡುವಂತಿಲ್ಲ. ಜತೆಗೆ ಈ ಸುದ್ದಿ ಟಿವಿ, ಪತ್ರಿಕೆ ರೇಡಿಯೋಗಳಲ್ಲಿ ಪ್ರಸಾರ ಹಾಗೂ ಚರ್ಚೆ ಆಗುವಂತಿಲ್ಲ ಎಂದು ಹೇಳಿದರು.
ಮೊಬೈಲ್, ಕ್ಯಾಮೆರಾ ನಿಷೇಧ: ಮತಗಟ್ಟೆ ಬಳಿ ಯಾರೊಬ್ಬರು ಮೊಬೈಲ್ ಮತ್ತು ಕ್ಯಾಮೆರಾಗಳನ್ನು ಕೊಂಡೊಯ್ಯುವಂತಿಲ್ಲ. ಹಾಗೆಯೇ ಏ.24ರ ಸಂಜೆ 5ರಿಂದ 26ರ ಮಧ್ಯರಾತ್ರಿ ಜಿಲ್ಲೆಯಾದ್ಯಂತ ಸಂತೆ, ಜಾತ್ರೆ ಹಾಗೂ ಮದ್ಯಪಾನ ನಿಷೇಧಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ನಗರ ಪೆÇಲೀಸ್ ಆಯುಕ್ತ ಬಿ. ರಮೇಶ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಇದ್ದರು.