ಏ.21 ರಂದು ಮಾತಾಜಿ ಕೋಟಿ ಜಪ ಯಜ್ಞ

ಕಲಬುರಗಿ,ಏ.19: ಯಾನಾಗುಂದಿ ಮಾತಾ ಮಾಣಿಕೇಶ್ವರಿ ಆಶ್ರಮ ಟ್ರಸ್ಟ್ ವತಿಯಿಂದ ಇದೇ ಏ.21ರಂದು ಚೈತ್ರ ಶುದ್ಧ ತ್ರಯೋದಶಿ ಪ್ರಯುಕ್ತ ಮುಂಜಾನೆ 6 ಗಂಟೆಯಿಂದ ಶ್ರೀ ಮಾತಾ ಮಾಣಿಕೇಶ್ವರಿಯವರ ಕೋಟಿ ಜಪ ಯಜ್ಞ ಹಮ್ಮಿಕೊಳ್ಳಲಾಗುತ್ತಿದೆ ಎಂದು ಟ್ರಸ್ಟ್ ಸದಸ್ಯ ಸಿದ್ರಾಮಪ್ಪ ಸಣ್ಣೂರ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಟ್ರಸ್ಟ್ ಕಾರ್ಯದರ್ಶಿ ಶಿವಯ್ಯಸ್ವಾಮಿ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕೋಟಿ ಜಪ ಯಜ್ಞದ ವೇಳೆ ಪಾಲ್ಗೊಳ್ಳುವ ಭಕ್ತರು ಓಂ ಶ್ರೀ ವೀರಧರ್ಮಜ ಪರಬ್ರಹ್ಮಣೇ ನಮಃ ಎಂದು ಜಪಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತರನ್ನು 1000ದಿಂದ 2000 ಭಕ್ತರ ಒಂದು ತಂಡದಲ್ಲಿ ಒಂದು ತಾಸಿನವರೆಗೆ ಜಪ ಯಜ್ಞ ಕೈಗೊಳ್ಳಬೇಕಿದ್ದು, ಒಟ್ಟು ಒಂದು ಕೋಟಿ ಜಪ ಮುಟ್ಟುವವರೆಗೆ ಈ ಜಪ ನಡೆಯಲಿದೆ. ಕಾರ್ಯಕ್ರಮದ ಪ್ರಯುಕ್ತ ಭಕ್ತರಿಗಾಗಿ ಪ್ರಸಾದ ಮತ್ತು ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಅಮ್ಮನವರ ದಿವ್ಯಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಕೋರಿದರು.
ಟ್ರಸ್ಟ್ ಕಾರ್ಯದರ್ಶಿ ಶಿವಯ್ಯಸ್ವಾಮಿ, ಸೂರ್ಯಕಾಂತ ಅವರಾದ, ದಿಲೀಪ್ ಕಿರಸಾವಳಗಿ, ರಜನಿ ಡಿ., ಮಾಣಿಕರಾಜ ಇದ್ದರು.