ಏ.2 ರಂದು ಶೋಭಾಯಾತ್ರೆ

ಹುಬ್ಬಳ್ಳಿ,ಮಾ31 : ಶ್ರೀ ಶಕ್ತಿ ಯುವಕ ಮಂಡಳ ಹಾಗೂ ಶ್ರೀರಾಮನವಮಿ ಉತ್ಸವ ಸಮಿತಿ ವತಿಯಿಂದ ‘ಬೃಹತ್ ಶೋಭಾಯಾತ್ರೆ’ ಕಾರ್ಯಕ್ರಮವನ್ನು ಎಪ್ರಿಲ್ 2 ರಂದು ರವಿವಾರ ಮಧ್ಯಾಹ್ನ 4 ಗಂಟೆಗೆ ನಗರದ ಶ್ರೀ ಶಕ್ತಿ ರಸ್ತೆಯಲ್ಲಿರುವ ಬಾಣಿ ಓಣಿಯಲ್ಲಿ ನಡೆಯಲಿದೆ ಎಂದು ಶ್ರೀ ರಾಮನವಮಿ ಉತ್ಸವ ಸಮಿತಿಯ ಕಾರ್ಯದರ್ಶಿ ಕೃಷ್ಣಾ ಗಂಡಗಾಳೇಕರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರುಸಾವಿರಮಠದ ಡಾ. ಗುರುಸಿದ್ಧರಾಜಯೋಗಿಂದ್ರ ಮಹಾಸ್ವಾಮಿಗಳು, ಸವದತ್ತಿ ತಾಲೂಕಿನ ಹುಲಿಕಟ್ಟಿ ಆಶ್ರಮದ ಶ್ರೀ ಭಾರ್ಗವಾನಂದ ಗಿರಿ ಮಹಾಸ್ವಾಮಿಗಳು ಶ್ರೀ ಛತ್ರಪತಿ ಮಹಾರಾಜರ 8 ಅಡಿಯ ಕಂಚಿನ, ಪುತ್ಥಳಿ ಅನಾವರಣಗೊಳಿಸಲಿದ್ದಾರೆ ಎಂದರು.
ಶ್ರೀರಾಮನ ಬೃಹತ್ ಮೂರ್ತಿಯ ಮೆರವಣಿಗೆ ಹಾಗೂ ಶ್ರೀ ಭಗೀರಥ ಮಹರ್ಷಿ ಜಯಂತಿ ಹಾಗೂ ಶ್ರೀ ಹನುಮಾನ್ ಜಯಂತಿಯ ಅಂಗವಾಗಿ ಸಾಮೂಹಿಕ ಬೃಹತ್ ಶೋಭಾಯಾತ್ರೆ ಮೆರವಣಿಗೆಯು ಬಾನಿ ಓಣಿಯಿಂದ ಆರಂಭವಾಗಿ ಸ್ಟೇಷನ್ ರೋಡ್, ಮರಾಠಗಲ್ಲಿ ಸರ್ಕಲ್, ಕೊಪ್ಪಿಕರ್ ರೋಡ್, ಶ್ರೀ ಶಕ್ತಿ ರೋಡ್ ಮರಳಿ ಬಾಣಿ ಓಣಿಗೆ ತಲುಪಿದ ನಂತರ ಕಾರ್ಯಕ್ರಮ ಅಂತ್ಯಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮನವಮಿ ಉತ್ಸವ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಶಿರಕೋಳ, ರಾಜೇಶ ಸಂಕದಾಳ, ಆನಂದ ಧರೇಕರ, ರಂಗಾ ಕಠಾರೆ ಉಪಸ್ಥಿತರಿದ್ದರು.