ಏ.2 ರಂದು ವಿಚಾರ ಸಂಕಿರಣ

ಹುಬ್ಬಳ್ಳಿ,ಮಾ30: ಲೋಹಿತ್ ಟ್ರಸ್ಟ್ ಹಾಗೂ ಸಾಮರಸ್ಯ ವೇದಿಕೆ ಸಹಯೋಗದಲ್ಲಿ ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಚಿಂತನೆಗಳ ಕುರಿತಂತೆ ವಿಚಾರ ಸಂಕಿರಣವನ್ನು ಏಪ್ರಿಲ್ 2 ರಂದು ಬೆ. 10 ಗಂಟೆಗೆ ನಗರದ ಗೋಕುಲ್ ರಸ್ತೆಯ ಲೋಕಮಾನ್ಯ ತಿಲಕ್ ಮಾರ್ಗದ ಕೇಶವಕುಂಜದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಚಾರ ಸಂಕಿರಣ ಸಂಚಲನಾ ಸಮಿತಿ ಗೌರವಾಧ್ಯಕ್ಷರು ಹಾಗೂ ಎಂಎಲ್ ಸಿ ಡಾ. ಸಾಬಣ್ಣ ತಳವಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರ ಸಂಕಿರಣವು ಬೆ. 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿವಿಧ ಗೋಷ್ಠಿಗಳಲ್ಲಿ ನಡೆಯುವುದು.
ದಿಕ್ಸೂಚಿ ಭಾಷಣವನ್ನು ಪ್ರಾಂತ ಸಹಸಂಚಾಲಕರು ಹಾಗೂ ಲೋಕಹಿತ ಟ್ರಸ್ಟ್ ಕರ್ನಾಟಕ ಉತ್ತರ ಅಧ್ಯಕ್ಷರಾದ ಅರವಿಂದರಾವ್ ದೇಶಪಾಂಡೆ, ಅಧ್ಯಕ್ಷತೆಯನ್ನು ಡಾ. ಸಾಬಣ್ಣ ತಳವಾರ ಹಾಗೂ ಅಂದಿನ ಕಾರ್ಯಕ್ರಮದಲ್ಲಿ ಸಾಮರಸ್ಯ ವೇದಿಕೆಯ ಪ್ರಾಂತ ಸಂಯೋಜಕರಾದ ಶಿವಲಿಂಗ ಕುಂಬಾರ ಉಪಸ್ಥಿತರಿರಲಿದ್ದಾರೆ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿಚಾರ ಸಂಕಿರಣ ಸಂಚಲನಾ ಸಮಿತಿಯ ಅಧ್ಯಕ್ಷರಾದ ಡಾ. ಜಿ.ಬಿ.ನಂದನ್ ವಹಿಸಲಿದ್ದು, ಸಮಾರೋಪ ಭಾಷಣವನ್ನು ಲೋಕಹಿತ ಟ್ರಸ್ಟ್ ಕಾರ್ಯದರ್ಶಿ ಶ್ರೀಧರ ನಾಡಿಗೇರ್ ಮಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂದೀಪ್ ಬೂದಿಹಾಳ, ಡಾ. ಜಿ.ಬಿ.ನಂದನ, ಶ್ರೀಧರ ನಾಡಿಗಿರ, ಶ್ರೀಧರ ಜೋಶಿ ಉಪಸ್ಥಿತರಿದ್ದರು.