ಏ.2ರಿಂದ ಜೀವನ ಮೌಲ್ಯಗಳು ಕುರಿತು ಪ್ರವಚನ ಹಾಗೂ ವಸಂತ ವಿಹಾರ ತರಬೇತಿ ಶಿಬಿರ

ಬೀದರ್: ಮಾ.10:ಏಪ್ರಿಲ್ 2ರಿಂದ 9ನೇ ತಾರಿಖಿನ ವರೆಗೆ ನಮ್ಮ ಆಶ್ರಮದಲ್ಲಿ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರಿಂದ ‘ಜೀವನ ಮೌಲ್ಯಗಳು’ ಕುರಿತು ಪ್ರವಚನ ಮಾಲಿಕೆ ಹಾಗೂ 3ನೇ ತರಗತಿಯಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ವಸಂತ ವಿಹಾರ ಶಿಬಿರ ಜರುಗಲಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಜ್ಯೋತಿರ್ಮಯಾನಂದ ಸ್ವಾಮಿಜಿ ತಿಳಿಸಿದರು.

ನಗರದ ಶಿವನಗರ ಉತ್ತರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಇಂದು ಪತ್ರಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.

ಕಳೆದ ಹಲವು ವರ್ಷಗಳಿಂದ ಶೈಕ್ಷಣಿಕವಾಗಿ, ಸಾಮಾಜವಾಗಿ, ಸಾಂಸ್ಕøತಿಕವಾಗಿ, ಅಧ್ಯಾಸಿಕವಾಗಿ ಜೊತೆಗೆ ಇತ್ತೀಚಿನ ಕೆಲವು ವರ್ಷಗಳಿಂದ ಎಲ್ಲಕ್ಕೂ ಮೇಲಾಗಿ ಎಲ್ಲಕ್ಕೂ ಮಿಗಿಲಾಗಿ ಎಲ್ಲರಿಂದಲೂ ಕಡೆಗಣಿಸುತ್ತಿರುವ ಕೃಷಿ ಹಾಗೂ ದೇಸಿ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಸೇವಾ ಕಾರ್ಯವನ್ನು ಈ ಗಡಿ ಭಾಗದಲ್ಲಿ ತಮ್ಮೇಲ್ಲರ ಸಹಕಾರದಿಂದ ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ. ದೇಶ-ವಿದೇಶಗಳಲ್ಲಿ ತಮ್ಮ ಪ್ರಬರ ಚಿಂತನೆ ಉಪನ್ಯಾಸಗಳಿಂದ ಖ್ಯಾತರಾದ ದೂಜ್ಯ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾಸ್ಥಾಮಿಗಳ ಉಪನ್ಯಾಸ ಶ್ರವಣ ಮನನ ಮಾಡುವ ಸುಯೋಗ ಇದೇ ಏಪ್ರಿಲ್ 2 ಜರುಗಲಿದ್ದು ತಾವೆಲ್ಲ ಸಮಯಾವಕಾಶ ಮಾಡಿಕೊಂಡು ಸಾಯಂಕಾಲ ಗೋಧುಳಿ ಸಮಯದಲ್ಲಿ ಗೋಶಾಲೆ ಅವರಣದಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.

ಅದೇ ರೀತಿ ವಸಂತ ವಿಹಾರ ಶಿಬಿರದಡಿ 3ನೇ ತರಗತಿ ಮಕ್ಕಳಿಂದ 10ನೇ ತರಗತಿ ಮಕ್ಕಳಿಗಾಗಿ ಏ.2ರಿಂದ ಏ.9ರ ವರೆಗೆ ಈ ಶಿಬಿರ ಹಮ್ಮಿಕೊಳ್ಲಲಾಗಿದೆ. ಹಾಗೇ ಪ್ರತಿ ವರ್ಷದಂತೆ ಈ ವರ್ಷ ಸಹ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೇ.31ರ ವರೆಗೆ ಬೇಸಿಗೆ ಶಿಬಿರ ವಸತಿ ಸಹಿತ ಜರುಗುವುದು

ಜೊತೆಗೆ ಇಲ್ಲಿಯ ಬ್ರಿಮ್ಸ್ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ನಿರ್ಭಯಾನಂದ ಸರಸ್ವತಿ ಸ್ವಾಮಿಜಿಗಳ ಪ್ರವಚನ ಮಾಲಿಕೆ ಎರ್ಪಡಿಸಲಾಗುವುದು.

ಆದ್ದರಿಂದ ಜಿಲ್ಲೆಯ ಪಾಲಕರು ಹಾಗೂ ಮಕ್ಕಳು ಮತ್ತು ಚಿಂತಕರು ಈ ಮೇಲಿನ ಶಿಬಿರಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜ್ಯೋತಿರ್ಮಯಾನಂದ ಸ್ವಾಮಿಜಿ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಗುರುನಥ ಕೊಳ್ಳೂರ್, ಬೀದರ್ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ ಶಟಕಾರ, ಇಂಜಿನಿಯರ್ ಹಾವಶೆಟ್ಟಿ ಪಾಟೀಲ, ಮುಖಂಡ ಪ್ರಕಾಶ ಟೊಣ್ಣೆ, ಹಿರಿಯ ವಿಜ್ಞಾನಿ ಪ್ರಿ.ಬಿ.ಜಿ ಮೂಲಿಮನಿ ಸೇರಿದಂತೆ ಇತರರಿದ್ದರು.