ಏ.18ರಂದು ಮುಖ್ಯಮಂತ್ರಿ ಚಂದ್ರು, ಬಿ.ವಿ ರಾಜರಾಮ್‍ಗೆ ಅಭಿನಂದನೆ

ಮೈಸೂರು. ಏ.5:- ಮುಖ್ಯಮಂತ್ರಿ ಚಂದ್ರು ಅವರು ಸತತವಾಗಿ 41 ವರ್ಷಗಳಿಂದ ರಂಗದ ಮೇಲೆ ಮುಖ್ಯಮಂತ್ರಿ ನಾಟಕದಲ್ಲಿ ಮುಖ್ಯಮಂತ್ರಿ ಪಾತ್ರಧಾರಿಯಾಗಿ ಅಭಿಯಯಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ.
ಈ ನಿಟ್ಟಿನಲ್ಲಿ ನಟ ಮುಖ್ಯಮಂತ್ರಿ ಚಂದ್ರು ಅವರಿಗೆ ಹಾಗೂ ಕಲಾ ಗಂಗೋತ್ರಿ ಮೂಲಕ 49 ವರ್ಷಗಳಿಂದ ರಂಗ ಸೇವೆಯಲ್ಲಿ ತೊಡಗಿರುವ , ಮುಖ್ಯಮಂತ್ರಿ ನಾಟಕದ ನಿರ್ದೇಶಕರಾದ ಬಿ.ವಿ ರಾಜರಾಮ್ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಮುಖ್ಯಮಂತ್ರಿ ನಾಟಕದ ಪ್ರದರ್ಶನವನ್ನು ಏಪ್ರಿಲ್ 18ರ ಭಾನುವಾರ ಸಂಜೆ 6 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮೈಸೂರು ನಗರಾಧ್ಯಾಕ್ಷ ಕೆ ಎಸ್ ಶಿವರಾಮ್ ತಿಳಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಪೆÇೀಸ್ಟರ್ ಬಿಡುಗಡೆಗೊಳಿಸಿ ಮಾಹಿತಿ ನೀಡಿದ ಅವರು ಏಪ್ರಿಲ್ 18 ರಂದು ನಡೆಯುವ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಶಿವರಾದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆ ಮತ್ತು ಅಭಿನಂದನೆಯನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ನೆರವೇರಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ನಾಡಿನ ಹಲವು ಸಾಹಿತಿಗಳು, ಚಿಂತಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಚಂದ್ರು, ಬಿ.ವಿ ರಾಜರಾಮ್, ಡಾ. ಸಿ ವೆಂಕಟೇಶ್, ಲೋಕೇಶ್ ಕುಮಾರ್, ರೋಹಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.