
ಸಂಜೆವಾಣಿ ವಾರ್ತೆ
ಸಿರುಗುಪ್ಪ:ಏ,17- ಏಕೀಕರಣ ಹೋರಾಟಗಾರರು, ಗಡಿನಾಡ ಸಾಹಿತಿಗಳಾದ ಶರಣ ದೊಡ್ಡಯ್ಯಶಾಸ್ತ್ರಿಗಳ ಮತ್ತು ಶರಣೆ ಬಸವಮ್ಮ ಅವ್ವನವರ ಸ್ಮರಣೋತ್ಸವ ಮತ್ತು ಶಿವಾನುಭವ ಕಾರ್ಯಕ್ರಮ ಏ. 18ರಂದು ತಾಲ್ಲೂಕಿನ ನಾಗರಹಾಳು ಗ್ರಾಮದ ಬೃಹನ್ಮಠದಲ್ಲಿ ಜರುಗಲಿದೆ.
ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗಸ್ವಾಮೀಜಿ, ಅಡವಿ ಅಮರೇಶ್ವರ ಶಾಂತಮಲ್ಲಸ್ವಾಮೀಜಿ, ಪಾಲ್ತೂರು ಚನ್ನವೀರ ಶಿವಾಚಾರ್ಯರು, ಬಸವಲಿಂಗಸ್ವಾಮೀಜಿ, ತೋಂಟದಾರ್ಯಸ್ವಾಮೀಜಿ, ಸಿರುಗುಪ್ಪ ಬಸವಭೂಷಣ ಸ್ವಾಮೀಜಿ, ರೌಡಕುಂದ ಶಿವಯೋಗಿ ಶಿವಾಚಾರ್ಯರು ಭಾಗವಹಿಸಲಿದ್ದಾರೆ.
ನಿವೃತ್ತ ಶಿಕ್ಷಕ ನಾ.ಮ. ವಾಮದೇವಯ್ಯ ಅವರ ‘ಭಾವ ಶಿಖರ’ ಕವನ ಸಂಕಲನವನ್ನು ಶ್ರೀಗಳು ಬಿಡುಗಡೆ ಮಾಡಲಿದ್ದಾರೆ. ಅದೇ ದಿನ ಸಂಜೆ 4ಕ್ಕೆ ಶರಣರ ರಥೋತ್ಸವ ಜರುಗಲಿದೆ ಎಂದು ಶ್ರೀಮಠದ ಬಸವರಾಜ ತಾತನವರು ತಿಳಿಸಿದ್ದಾರೆ.
One attachment • Scanned by Gmail
ReplyForward |