ಏ.17ರಂದು ನಾಮಪತ್ರ ಸಲ್ಲಿಕೆ: ರಾಜಶೇಖರ್ ಪಾಟೀಲ್

(ಸಂಜೆವಾಣಿ ವಾರ್ತೆ)
ಹುಮನಾಬಾದ್:ಎ.10: ಪಟ್ಟಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಳಿಗ್ಗೆ 10 ಗಂಟೆಗೆ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಸಲ್ಲಿಸಲಾಗುವುದು. ನಂತರ ದೇವಸ್ಥಾನದಿಂದ ಮೆರವಣಿಗೆ ಮೂಲಕ ತಹಶೀಲ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಪ್ಸರ್ ಮಿಯ್ಯಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಷೇತ್ರದ ಜನರು ಆಶೀರ್ವಾದ ಮಾಡುತ್ತಾರೆ ಎಂಬ ಭರವಸೆಯೊಂದಿಗೆ 2023ರ ವಿಧಾನಸಭೆ ಚುನಾವಣೆ ಸ್ಪರ್ಧೆಗಾಗಿ ಏ.17ರಂದು ಹುಮನಾಬಾದ್ ತಹಸೀಲ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದರು.
ಶಾಸಕ ರಾಜಶೇಖರ ಪಾಟೀಲ ಮಾತನಾಡಿ, 2023ರ ವಿಧಾನ ಸಭಾ ಚುನಾವಣೆ ನನ್ನ 7ನೇ ಚುನಾವಣೆ ಆಗಿದೆ. ಈ ಹಿಂದಿನ ಚುನಾವಣೆಗಿಂತಲೂ ಈ ಬಾರಿ ಸಾರ್ವಜನಿಕರಿಂದ ಉತ್ತಮವಾದ ಅಭಿಪ್ರಾಯ ಬರುತ್ತಿದೆ. ಹೀಗಾಗಿ ಈ ಸುಮಾರು 40 ಸಾವಿರ ಮತಗಳ ಅಂತರದಿಂದ ನನ್ನ ಗೆಲುವು ಖಚಿತ ಆಗಲಿದೆ ಎಂದರು.
ಸತೀಶ್ ರಾಂಪೂರೆ, ಬಾಬು ಟೈಗರ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಭೀಮಾರಾವ್ ಪಾಟೀಲ, ಜಿಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ, ಲಕ್ಷ್ಮಣರಾವ್ ಬುಳ್ಳಾ, ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಓಂಕಾರ ತುಂಬಾ, ದತ್ತು ಕುಮಾರ್ ಚಿದ್ರಿ, ಶ್ರೀಮಂತ ಪಾಟೀಲ, ದಾನಪ್ಪ ಕಂಟೆಪ್ಪ , ಸೇರಿದಂತೆ ಇತರರು ಇದ್ದರು.