ಏ. 15ರಂದು ವಿಶ್ವ ದೃಶ್ಯಕಲಾ ದಿನಾಚರಣೆ

ಕಲಬುರಗಿ:ಏ.11: ನಗರದ ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆ ಮತ್ತು ವಿ. ಬಿ. ಬಿರಾದಾರ್ ಕಲಾ ಪ್ರತಿμÁ್ಠನ ಸಂಯುಕ್ತಾಶ್ರಯದಲ್ಲಿ ಜಗತ್ತಿನ ಪ್ರಸಿದ್ಧ ಚಿತ್ರಕಲಾವಿದ, ಶಿಲ್ಪಕಲಾವಿದ, ಬರಹಗಾರ ಹಾಗೂ ಸಂಶೋಧಕ ಲಿಯೋನಾರ್ಡೊ ಡಾ. ವಿಂಚಿಯ ಜನ್ಮದಿನದ ಅಂಗವಾಗಿ ವಿಶ್ವ ದೃಶ್ಯಕಲಾ ದಿನಾಚರಣೆಯನ್ನು ವಿನೂತನವಾಗಿ ಆಚರಿಸುವ ಉದ್ದೇಶದಿಂದ ಏಪ್ರಿಲ್ 15ರಂದು ನಗರದ ರಾಮ ಮಂದಿರದ ಹಿಂದುಗಡೆ ಇರುವ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಹಿರಿಯ ಚಿತ್ರಕಲಾವಿದ ವಿ.ಬಿ. ಬಿರಾದಾರ್ ಅವರು ರಚಿಸಿದ ನಿಸರ್ಗ ಚಿತ್ರಗಳ ಪ್ರದರ್ಶನ ಮತ್ತು ಹಿರಿಯ ಚಿತ್ರಕಲಾವಿದ ಬಸವರಾಜ್ ಎಲ್. ಜಾನೆ ಅವರಿಂದ ಕಲಾ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಪರಶುರಾಮ್ ಪಿ., ಅವರು ತಿಳಿಸಿದ್ದಾರೆ.
ಏಪ್ರಿಲ್ 15ರಂದು ಸಂಜೆ 4 ಗಂಟೆಗೆ ಹಿರಿಯ ಚಿತ್ರಕಲಾವಿದ ಬಸವರಾಜ್ ರೇ. ಉಪ್ಪಿನ್ ಅವರು ಉದ್ಘಾಟನೆ ಮಾಡುವರು. ಮುಖ್ಯ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್. ನಿರಗುಡಿ ಅವರು ಭಾಗವಹಿಸುವರು. ಹಿರಿಯ ಚಿತ್ರಕಲಾವಿದ ನಾಡೋಜ್ ಡಾ. ಜೆ.ಎಸ್. ಖಂಡೇರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಚಿತ್ರಕಲಾವಿದ ವಿ.ಬಿ. ಬಿರಾದಾರ್ ಅವರು ಜಲವರ್ಣದಲ್ಲಿ ರಚಿಸಿದ ಸುಮಾರು 35ಕ್ಕೂ ಹೆಚ್ಚು ನಿಸರ್ಗ ಚಿತ್ರಗಳು ಏಪ್ರಿಲ್ 15ರಿಂದ 21ರವರೆಗೆ ಬೆಳಿಗ್ಗೆ 11ರಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.