ಏ.14 ರಿಂದ ಶರಣ ದರ್ಶನ ಪ್ರವಚನ


ಹುಬ್ಬಳ್ಳಿ,ಏ.11: ಬಸವ ಜಯಂತಿ ನಿಮಿತ್ತವಾಗಿ ‘ಶರಣ ದರ್ಶನ ಪ್ರವಚನ’ಗಳನ್ನು ಏ. 14 ರಿಂದ 22 ರವರೆಗೆ ನಗರದ ಗೋಕುಲ್ ರಸ್ತೆಯ ಮೂರಾರ್ಜಿ ನಗರದಲ್ಲಿರುವ ಬಸವಕೇಂದ್ರದ ವ್ಹಿ.ಎಂ.ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಕೇಂದ್ರದ ಅಧ್ಯಕ್ಷರಾದ ಜಿ.ಬಿ.ಹಳ್ಯಾಳ. ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿದಿನ ಸಂಜೆ 5 ಗಂಟಗೆ ಪ್ರವಚನ ಆರಂಭವಾಗಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಶರಣ ಸಾಹಿತಿ ಹಾಗೂ ಬಸವಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ವೀರಣ್ಣ ರಾಜೂರ ಅವರು ನೆರವೇರಿಸಲಿದ್ದಾರೆ ಎಂದರು.

ಏ. 14 ರಂದು ಡಾ. ಅಂಬೇಡ್ಕರ್ ಜಯಂತಿ ನಿಮಿತ್ತ, ಏ. 16 ರಂದು ಶರಣ ನುಲಿಯ ಚಂದಯ್ಯನವರು, ಏ. 15 ರಂದು ಶರಣ ಮಡಿವಾಳ ಮಾಚಯ್ಯನವರು, ಏ. 17 ರಂದು ಶರಣ ಅಂಬಿಗರ ಚೌಡಯ್ಯನವರು, ಏ. 18 ರಂದು ಶರಣ ಡೋಹರ ಕಕ್ಕಯ್ಯನವರು, ಏ. 19 ರಂದು ಶರಣ ಮಾದಾರ ಚೆನ್ನಯ್ಯನವರು, ಏ. 19 ರಂದು ಶರಣ ಹಡಪದ ಅಪ್ಪಣ್ಣನವರು, ಏ. 21 ರಂದು ಶರಣ ಸಮಗಾರ ಹರಳಯ್ಯನವರ ಶರಣರ ದರ್ಶನ ಪ್ರವಚನಗಳು ನಡೆಯಲಿವೆ ಎಂದರು.

ಏ. 23 ರಂದು ಬಸವ ಜಯಂತಿ ಕಾರ್ಯಕ್ರಮ ಅಂಗವಾಗಿ ಬಸವಣ್ಣನವರ ಹಾಗೂ ಎಲ್ಲ ಶರಣರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆಯು ಬೆ. 8 ಗಂಟೆಗೆ ಆರಂಭವಾಗಿ ಗೋಕುಲ್ ರಸ್ತೆಯ ಅರ್ಜುನ್ ವಿಹಾರ ಕ್ರಾಸಿನಿಂದ ಎಲ್ಲ ಶಿವಶರಣರ ಭಾವಚಿತ್ರಗಳೊಂದಿಗೆ ಲೋಹಿಯಾ ನಗರ ಮತ್ತು ಮೊರಾರ್ಜಿ ನಗರಗಳ ಮುಖಾಂತರ ಬಸವ ಸಂಸ್ಕೃತಿ ಶಾಲೆ ತಲುಪಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪೆÇ್ರ. ಎಸ್.ವಿ.ಪಟ್ಟಣಶೆಟ್ಟಿ, ಬಿ.ಎಸ್.ಮಾಳವಾಡ, ಶಿವಯೋಗಿ ಮುರ್ಖಂಡಿ, ಬಿ.ಎಲ್.ಲಿಂಗಶೆಟ್ಟರ್ ಉಪಸ್ಥಿತರಿದ್ದರು.