ಏ.14ರಂದು ಮ್ಯಾರಥಾನ್ ಕಾರ್ಯಕ್ರಮ

ಮೈಸೂರು,ಮಾ.29:- ವಿಶ್ವಜ್ಞಾನಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾರತೀಯ ಪರಿವರ್ತನಾ ಸಂಘ, ಭಾರತೀಯ ವಿದ್ಯಾರ್ಥಿ ಸಂಘ, ದಲಿತ ಸಂಘಟನೆಗಳ ಒಕ್ಕೂಟ, ಸಂಶೋಧಕರ ಸಂಘದ ಸಹಕಾರದಲ್ಲಿ ಏಪ್ರೀಲ್ 14ರಂದು ಡಾ.ಬಿ.ಆರ್.ಅಂಬೇಡ್ಕರ್ 130ನೇ ಜನ್ಮದಿನದ ಪ್ರಯುಕ್ತ ಟೌನ್ ಹಾಲ್ ನಿಂದ ಮ್ಯಾರಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಮಾಹಿತಿ ನೀಡಿ ಮ್ಯಾರಥಾನ್ ನಲ್ಲಿ ಮೊದಲನೆ ಬಹುಮಾನ 15,000ರೂ, ದ್ವಿತೀಯ ಬಹುಮಾನ 10,000ರೂ, ತೃತೀಯ ಬಹುಮಾನ 5,000ರೂ. ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ಮತ್ತು ಟೀಷರ್ಟ್ ನೀಡಲಾಗುವುದು.
ಮ್ಯಾರಥಾನ್ ಪ್ರಯಾಣವು ಟೌನ್ ಹಾಲ್ ನಿಂದ ಹೊರಟು ಹಾರ್ಡಿಂಜ್ ಮೂಲಕ ಅಗ್ರಹಾರ ವೃತ್ತ, ಅಶೋಕವೃತ್ತ, ಬ್ರಾಂಡ್ ಫ್ಯಾಕ್ಟರಿಯಿಂದ ಕೋರ್ಟ್ ಮೂಲಕ ಕ್ರಾಫರ್ಡ್ ಹಾಲ್ ಮೂಲಕ ಮೆಟ್ರೋಪೆÇೀಲ್ ವೃತ್ತ, ರೈಲ್ವೆ ನಿಲ್ದಾಣ, ಕೆ.ಆರ್.ಆಸ್ಪತ್ರೆಯಿಂದ ಅಶೋಕ ರಸ್ತೆಯ ಮೂಲಕ ಟೌನ್ ಹಾಲ್‍ಗೆ ಬಂದು ಸೇರಲಿದೆ ಎಂದು ತಿಳಿಸಿದರು.