ಏ 13 ರಂದು ಎಸ್.ಎಸ್.ಕೆ.ಸಾವಜಿ ಹೊಟೇಲ್ ಮಾಲೀಕರ ಸಂಘ ಉದ್ಘಾಟನೆ

ಹುಬ್ಬಳ್ಳಿ,ಏ10: ಎಸ್.ಎಸ್.ಕೆ ಸಾವಜಿ ಹೊಟೇಲ್ ಮಾಲೀಕರ ಸಂಘದ ಉದ್ಘಾಟನೆ ಕಾರ್ಯಕ್ರಮ ಏಪ್ರಿಲ್ 13 ರಂದು ಬೆಳಿಗ್ಗೆ 11 ಗಂಟೆಗೆ ದಾಜಿಬಾನ್ ಪೇಟೆಯ ಶ್ರೀ ತುಳಜಾ ಭವಾನಿ ಮಂದಿರದಲ್ಲಿ ಸರಳವಾಗಿ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ರಾಮಚಂದ್ರ ಹಬೀಬ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಜಿ ಹೊಟೆಲ್ ಗಳಲ್ಲಿ ಸುಮಾರು ನೂರು ವರ್ಷಗಳಿಂದ ಮನೆಯಲ್ಲಿ ಮಾಡುವಂತಹ ಊಟವನ್ನು ಹೊಟೆಲ್ ಮುಖಾಂತರ ಎಲ್ಲ ನಾಗರಿಕರಿಗೆ ತಲುಪುವಂತೆ ಮಾಡುತ್ತಿದ್ದು, ಇದು ಉತ್ತರ ಕರ್ನಾಟಕದ ಹೆಮ್ಮೆಯ ಊಟವಾಗಿದೆ. ಅದನ್ನು ಇದೀಗ ಸಂಘದ ಮುಖಾಂತರ ರಾಜ್ಯವ್ಯಾಪ್ತಿಯಾಗಿ ಬೆಳೆಸುವ ಉದ್ದೇಶದಿಂದ ಸಂಘವನ್ನು ಸ್ಥಾಪಿಸಲಾಗಿದೆ. ಈಗಾಗಲೇ ಸಂಘದಲ್ಲಿ 200 ಜನರು ಸದಸ್ಯರಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಂಘದ ಸಂಸ್ಥೆಗಳನ್ನು ಮಾಡುವ ಕಾರ್ಯವನ್ನು ಮಾಡಿ, ಸ್ವೀಗಿ, ಜೋಮ್ಯಾಟೋ ರೀತಿಯಲ್ಲಿ ಆನ್‍ಲೈನ್ ಮೂಲಕ ಎಲ್ಲ ಮನೆ ಮನೆಗೂ ಸಾವಜಿ ಊಟ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.
ಇನ್ನೂ ಸಂಘದ ಉದ್ಘಾಟನೆ ಕಾರ್ಯಕ್ರಮಕ್ಕೆ ಸಮಾಜದ ಧರ್ಮದರ್ಶಿಗಳಾದ ನೀಲಕಂಠಸಾ ಜಡಿ ಸೇರಿದಂತೆ ಸಮಾಜದ ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ನಾಗೇಂದ್ರಸಾ ಇರಕಲ್, ಪ್ರಧಾನ ಕಾರ್ಯದರ್ಶಿ ಗೋವಿಂದ ಮಿಸ್ಕಿನ್, ಕಾರ್ಯದರ್ಶಿ ಗಣಪತಸಾ ಮಿಸ್ಕಿನ್, ಸಹ ಕಾರ್ಯದರ್ಶಿ ಸಂತೋಷ ಭಾಂಡಗೆ, ಸಂಘಟನಾ ಕಾರ್ಯದರ್ಶಿ ಗಣಪತಿ ಪವಾರ್, ಸಹ ಸಂಘಟನಾ ಕಾರ್ಯದರ್ಶಿ ಅರುಣ ಬಾಕಳೆ, ಗೋಪಾಲಸಾ ಖೋಡೆ, ಅಮೃತ ಕಲಬುರ್ಗಿ ಸೇರಿದಂತೆ ಮುಂತಾದವರು ಇದ್ದರು.