ಏ.13 ಕ್ಕೆ ಜಗಳೂರಿನಲ್ಲಿ ಸ್ವಯಂ ಪ್ರೇರಿತ ಶಾಂತಿಯುತ ಬಂದ್ ನ ಭಿತ್ತಿಚಿತ್ರ ಬಿಡುಗಡೆ

ಸಂಜೆವಾಣಿ ವಾರ್ತೆ

 ಜಗಳೂರು.ಏ.೧೧-: ಏಪ್ರಿಲ್ 13 ರಂದು ಕರೆ ನೀಡಿರುವ ಸ್ವಯಂಪ್ರೇರಿತ,ಶಾಂತಿಯುತ ಬಂದ್ ಗೆ ವಿವಿಧ ಸಂಘ ಟನೆಗಳು,ಮಹಿಳೆಯರು,ಕಾರ್ಮಿಕರು,ರೈತರು ವಿದ್ಯಾ ರ್ಥಿಯುವ ಜನತೆ ಸಂಪೂರ್ಣ ಬೆಂಬಲಿಸಬೇಕು ಎಂದು ಹಿರಿ ಯ ಪತ್ರಕರ್ತ ಹಾಗೂ ಹೋರಾಟಗಾರ ದೊಣೆಹಳ್ಳಿ ಗುರುಮೂರ್ತಿ ಕರೆ ನೀಡಿ ದರು.ಪಟ್ಟಣದ ಹಳೇ ಕ್ಲಬ್ ನಲ್ಲಿ ಭದ್ರಾಮೇಲ್ದಂಡೆ ಹೋರಾಟ ಸಮಿ ತಿ ಯಿಂದ ನಡೆದ ಪತ್ರಿಕಾಗೋಷ್ಠಿ ಮತ್ತು ಬಂದ್ ನ ಭಿತ್ತಿಚಿತ್ರ ಬಿಡು ಗಡೆಗೊಳಿಸಿ ನಂತರ ಮಾತನಾಡಿದರು.ಭದ್ರಾಮೇಲ್ದಂಡೆ ನೀರಾವರಿ ಯೋಜನೆ ಜಾರಿಗೊಳಿಸಲು ದೀ ರ್ಘಾ ವಧಿ ಪಯಣವಾಗಿದೆ.ಚೀನಾದ ಮಾವೋತ್ಸೆ ತುಂಗಾ ಘ ಟನೆಯಲ್ಲಿ ಒಬ್ಬ ಪ್ರೌಢಶಾಲೆ ಶಿಕ್ಷನಿಂದ ನಡೆದ ಲಾಂಗ್ ಮಾ ರ್ಚ್ ನಮಗೆ ಮಾದರಿಯಾಗಬೇಕಿದೆ.ಪುನಃ ಹೊರಾಟ ರೂಪಿಸ ಲಾಗಿದೆ. ಸರ್ಕಾರ ಶೀಘ್ರ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣ ಗೊಳಿಸಬೇಕು ವಿಳಂಬಗೊಳಿಸಿದಲ್ಲಿ ಹಂತಹಂತ ವಾಗಿ ಹೋರಾ ಟದ ರೂಪರೇಶಗಳನ್ನು ಸಮಿತಿಯಿಂದ ಸಭೆ ನಡೆಸಿ ತೀರ್ಮಾನಿಸ ಲಾಗುವುದು.ಏ.13 ರಂದು ನಡೆಯಲಿರು ವ ಬಂದ್ ಇಪ್ಟಾ ಕಲಾ ತಂಡದೊಂದಿಗೆ ಹೊರಾಟಗೀತೆಗಳು ಶಾಂತಿ ಯುತ ಬಂದ್ ಸಾಂಸ್ಕೃತಿಕ ಬಂದ್ ಆಗಿ ಪರಿಣಮಿಸಲಿದೆ ಎಂದು ತಿಳಿಸಿದರು.ಹೊರಾಟಗಾರ ಹಾಗೂ ನಿವೃತ್ತ ಪ್ರಾಂಶುಪಾಲ ಯಾದವರೆಡ್ಡಿ ಮಾತ ನಾಡಿ,1967 ರಿಂದ ಭದ್ರಮೇಲ್ದಂಡೆ ಯೋಜನೆ ಕನಸಾಗಿ ದ್ದು.ದಶಕಗಳಿಂದ ಹೊರಾಟ ಆರಂಭವಾಗಿದೆ.ಆದರೆ ಎಲ್ಲಾ ಆಡ ಳಿತ ಪಕ್ಷಗಳ ಇಚ್ಛಾಶಕ್ತಿಯ ಕೊರತೆಯಿಂದ ಇದುವರೆಗೂ ಕಾಮ ಗಾರಿ ಪೂರ್ಣಗೊಂಡಿಲ್ಲ.ಕೇಂದ್ರದ ಬಿಜೆಪಿ ಆಡಳಿತ ಸರಕಾರ ಕೇಂದ್ರ ಜಲನಿಗಮದಿಂದ ರಾಷ್ಟ್ರೀಯ ಯೋಜನೆಯ ನ್ನಾಗಿಸಿ ಕಾಲ್ಪ ನಿಕ ಕಥೆಯನ್ನು ಸೃಷ್ಠಿಸಿ ನಂತರ ಅನುದಾನ ಬಿಡು ಗಡೆಗೊಳಿಸದೆ ಹನಿನೀರಾವರಿ ಯೋಜನೆಯಾಗಿದ್ದು ಕೊನೆಯ ಹಂತದಲ್ಲಿ ಹಣ ಬಿಡುಗಡೆಮಾಡಲಾಗುವುದು ಎಂದು ಸಬೂ ಬು ಹೇಳಿ ಕೈತೊಳೆ ದುಕೊಂಡಿದೆ.ಇತ್ತೀಚೆಗೆ ಮುಖ್ಯಮಂತ್ರಿ ಘೋಷಿಸಿದ ಬಜೆಟ್ ನಲ್ಲಿ ₹19000 ಕೋಟಿ ನೀರಾವರಿ ಯೋ ಜನೆಗೆ ಮೀಸಲಿಟ್ಟಿದೆ ಅದರ ಲ್ಲಿ ಒಂದು ನಯಪೈಸೆಯನ್ನೂ ಭದ್ರಾಮೇಲ್ದಂಡೆ ಯೋಜನೆಗೆ ಬಿಡುಗಡೆಮಾಡದೆ ನಿರ್ಲಕ್ಷ್ಯವ ಹಿಸಿದೆ.ಮಧ್ಯಕರ್ನಾಟಕ ಉತ್ತರ ಕರ್ನಾಟಕ,ಮೈಸೂರುಕರ್ನಾ ಟಕಗಳಿಗಿಂತ ನೀರಾವರಿ ಸೌಲಭ್ಯದ ಲ್ಲಿ ವಂಚಿತವಾಗಿದೆ ಎಂದು ದೂರಿದರು.ಸಾಹಿತಿ ಡಾ.ಅಶೋಕ ಕುಮಾರ್ ಸಂಗೇನಹಳ್ಳಿ ಮಾತನಾಡಿ, ಬಂ ದ್ ಕುರಿತು ಜಾಗೃತಿ ಮೂಡಿಸಲು ಏಪ್ರಿಲ್ 11ಮತ್ತು 12 ರಂದು ಪ್ರಮುಖ 4 ಬೀದಿಗಳಲ್ಲಿ ಪಥಸಂಚಲನ ನಡೆಸಲಾಗು ವುದು.ಯು ವಕರ ತಂಡಗಳು ಹಾಗೂ ಪತ್ರಕರ್ತರು ಭಾಗವಹಿಸ ಲಿದ್ದಾರೆ ಎಂದು ಹೇಳಿದರು.ಹೊರಾಟ ಸಮಿತಿ ಪ್ರಧಾನಕಾರ್ಯದರ್ಶಿ ವಕೀಲ ಆರ್.ಓಬಳೇಶ್ ಮಾತನಾಡಿ,57 ಕೆರೆ ತುಂಬಿಸುವ ಯೋಜನೆಯಡಿ ನೀರು ತಾಲೂ ಕಿನ ಒಂದು ಕೆರೆಗೂ ಅಂಟಿಕೊಂಡಿಲ್ಲ.ಭದ್ರಾ ಮೇಲ್ದಂಡೆ ಯೋಜ ನೆ ಕಾಮಗಾರಿ ಪೂರ್ಣಗೊಳ್ಳುವುದು ಕನ ಸಿನಮಾತು ಇದಕ್ಕಾಗಿ ಯೇ ರಾಜಕೀಯ ಪಕ್ಷಗಳ ಗಮನ ಸೆಳೆ ಯಲು ಚುನಾವಣೆ ವೇಳೆ ಬಂದ್ ಗೆ ಕರೆ ನೀಡಲಾಗಿದೆ.ನಾವು ರಾಜಕಾರಣಿಗಳಲ್ಲ ಬಂದ್ ಗೆ ನೀತಿ ಸಂಹಿತೆ ಅಡ್ಡಿಯಾಗುವುದಿ ಲ್ಲ ಎಂದರು.ಈ ಸಂದರ್ಭದಲ್ಲಿ ಹೊರಾಟ ಸಮಿತಿಯ ಮುಖಂಡರಾದ ವಾಲಿ ಬಾಲ್ ತಿಮ್ಮಾರೆಡ್ಡಿ,ಎ.ಡಿ.ನಾಗಲಿಂಗಪ್ಪ,ಅನ್ವರ್ ಸಾಹೇ ಬ್,ಸತ್ಯ ಮೂರ್ತಿ,ನಾಗೇಂದ್ರರೆಡ್ಡಿ,ವಕೀಲ ಸಣ್ಣ ಓಬಯ್ಯ,ಸೂರ ಲಿಂಗಪ್ಪ, ಇಂದಿರಾ,ಎನ್ ಎಸ್ ರಾಜು,ಅನಂತರಾಜ್, ಮಹಾಲಿಂಗಪ್ಪ, ದೊಣ್ಣೆ ಹಳ್ಳಿ ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಚೌಡಮ್ಮ  ರೇಖಾ,ನೂರುದ್ದೀನ್,ಸೇರಿದಂತೆ ಇದ್ದರು