ಏ.10, 11ರಂದು ರಾಜ್ಯ ಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆ

ದಾವಣಗೆರೆ,ಏ.8: ಗ್ರೂಪ್ ಆಫ್ ಐರನ್ ಗೇಮ್ಸ್ ಹಾಗೂ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಏ.10 ಮತ್ತು 11 ರಂದು ರಾಜ್ಯ ಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಗ್ರೂಪ್ ಆಫ್ ಐರನ್ ಗೇಮ್ಸ್ನ ಕಾರ್ಯದರ್ಶಿ ರಜ್ವಿಖಾನ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಏ.10ರಂದು ಬೆಳಿಗ್ಗೆ 10 ಗಂಟೆಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಸ್ಪರ್ಧೆ ಉದ್ಘಾಟಿಸಲಿದ್ದಾರೆ. ಅಂತರಾಷ್ಟಿçÃಯ ಪವರ್ ಲಿಫ್ಟಿಂಗ್ ಕ್ರೀಡಾಪಟು ಎಂ.ಮಹೇಶ್ವರಯ್ಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ಎ.ರವೀಂದ್ರನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಡಿವೈಎಸ್‌ಪಿ ಪಿ.ಬಿ.ಪ್ರಕಾಶ್, ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಸತೀಶ್‌ಕುಮಾರ್ ಕುದ್ರೋಳಿ, ಕೆ.ಎನ್.ಶೈಲಜ, ಪಾಲಿಕೆ ಮಹಾಪೌರ ಎಸ್.ಟಿ.ವೀರೇಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಪಾಲಿಕೆ ಸದಸ್ಯ ಕೆ.ಎಂ.ವೀರೇಶ, ಮಾಜಿ ಸದಸ್ಯ ದೋಣಿ ನಿಂಗಪ್ಪ, ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಪಿ.ಜಿ.ಪಾಂಡುರAಗ, ಜಿಲ್ಲಾ ವೇಟ್ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಎಚ್.ಮಹೇಶ್, ರಾಷ್ಟಿçÃಯ ಕಬಡ್ಡಿ ಕ್ರೀಡಾಪಟು ಎಚ್.ಷರೀಫ್ ಭಾಗವಹಿಸುವರು ಎಂದು ತಿಳಿಸಿದರು.ಏ.11ರಂದು ಸಂಜೆ 5.30ಕ್ಕೆ ನಡೆಯುವ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಎಚ್.ದಾದಾಪೀರ್ ಅಧ್ಯಕ್ಷತೆ ವಹಿಸುವರು. ಅಥಿತಿಗಳಾಗಿ ಡಿವೈಎಸ್‌ಪಿ ನಾಗೇಶ್ ಐತಾಳ್, ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ವಿಶೇಷ ಆಹ್ವಾನಿತರಾಗಿ ಎಸ್.ನಾಗರಾಜ್, ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಕೆ.ಗಂಗಪ್ಪ, ಗ್ರೂಪ್ ಆಫ್ ಐರನ್ ಗೇಮ್ಸ್ ಖಜಾಂಚಿ ಷಣ್ಮುಖ ಎಂ.ಎಚ್, ಕ್ರೀಡಾ ಪ್ರೋತ್ಸಾಹಕರಾದ ಮಹಮ್ಮದ್ ಉಮರ್, ಎಸ್.ಕುಮಾರ್, ಎಚ್.ಬಸವರಾಜ್, ಬಿ.ದಾದಾಪೀರ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.ಸಂಸ್ಥೆಯ ಅಧ್ಯಕ್ಷ ಎಚ್.ದಾದಾಪೀರ್ ಮಾತನಾಡಿ, ಕಾರ್ಯಕ್ರಮದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತೆ ಬಿ.ಎಚ್.ಭಾರತಿ, ರಾಷ್ಟಿçÃಯ ಚಿನ್ನದ ಪದಕ ವಿಜೇತ ಲೋಗನಾಥನ್, ಏಷ್ಯನ್ ಚಿನ್ನದ ಪದಕ ವಿಜೇತ ರಜ್ವಿಖಾನ್, ಅಂತರಾಷ್ಟಿçÃಯ ಕ್ರೀಡಾಪಟು, ಪಾಲಿಕೆ ಸದಸ್ಯರು ಆದ ಜೆ.ಎನ್.ಶ್ರೀನಿವಾಸ್, ಕಾಮನ್ ವೆಲ್ತ್ ಚಾಂಪಿಯನ್ ವಿಶ್ವನಾಥ್ ಗಾಣಿಗ, ಪ್ರದೀಪ್ ಆಚಾರ್ಯ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.ಕೆ.ಮಲ್ಲಪ್ಪ, ಸುಭ್ರತೋ ದತ್ತ ಹಾಗೂ ಮರಿಸಿದ್ದಪ್ಪ, ಎಚ್.ವೆಂಕಟೇಶ್ ಅವರ ಹೆಸರಿನಲ್ಲಿ ನಿರ್ಮಿಸಿರುವ ಎರಡು ಪ್ರತ್ಯೇಕ ವೇದಿಕೆಯಲ್ಲಿ ಪುರುಷರ ಮತ್ತು ಮಹಿಳೆಯರ ಸಬ್ ಜ್ಯೂನಿಯರ್, ಜ್ಯೂನಿಯರ್ ಮತ್ತು ಮಾಸ್ರ‍್ಸ್ ವಿಭಾಗದಲ್ಲಿ ನಡೆಯುವ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ರಾಜ್ಯದ ನೂರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದು, ಇಲ್ಲಿ ವಿಜೇತರಾದವರನ್ನು ಗೋವಾದಲ್ಲಿ ನಡೆಯುವ ರಾಷ್ಟಿçÃಯ ಬೆಂಚ್ ಪ್ರೆಸ್ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಕ್ರೀಡಾಪಟುಗಳಾದ ಮಹೇಶ್ವರಯ್ಯ, ಕೆ.ಗಂಗಪ್ಪ, ಷಣ್ಮುಖ, ಷರೀಫ್ ಹಾಜರಿದ್ದರು.