ಸಂಜೆವಾಣಿ ವಾರ್ತೆ
ಕುರುಗೋಡು:ಏ.05- ಪಟ್ಟಣ ಸಮೀಪದ ಸುಕ್ಷೇತ್ರ ಸೋಮಲಾಪುರ ಗ್ರಾಮದ ಅರಾಧ್ಯ ದೈವ ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ 31ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಏ.10ಕ್ಕೆ ಜರುಗುವ ಮಹಾರಥೋತ್ಸವ, ಸಾಮೂಹಿಕ ವಿವಾಹ, ಶರಣರಿಂದ ಪುರಾಣ ಪ್ರವಚನ ಮತ್ತು ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗುವ ನಿಮಿತ್ತ ಪಂಚಮಠಾಧೀಶರು ಶ್ರೀ ಸದ್ಗುರು ಷಡಕ್ಷರಿ ಮಹಾಸ್ವಾಮಿ ಅವಧೂತರ ದಿವ್ಯ ಸಾನಿಧ್ಯದಲ್ಲಿ ರಥದ ಗಡ್ಡೆತೇರಿಗೆ ನಾನಾ ಧಾರ್ಮಿಕ ವಿಧಿ ವಿಧಾನಗಳಿಂದ ಪೂಜೆ ಸಲ್ಲಿಸಿ ಭಕ್ತರು ಬುಧವಾರ ಬೆಳಿಗ್ಗೆ ತೇರಿನ ಮನೆಯಿಂದ ರಥದ ಗಡ್ಡೆತೇರನ್ನು ಹೊರಗಡೆ ತರಲಾಯಿತು.
ಈ ಸಂದರ್ಭದಲ್ಲಿ ಸೋಮಲಾಪುರ ಗ್ರಾಮದ ಭಕ್ತರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಪಾಲ್ಗೊಂಡಿದ್ದರು.