ಏ. 1 ಹಾಗೂ 2 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ:ಮಾ.31:ಸರಡಗಿಯ ಮೂಲ ಸ್ಥಾವರ ಹಾಗೂ ಕೂಟನೂರಿನ ಮಧ್ಯಂತರ ಪಂಪಿನ ಮನೆಯಲ್ಲಿ ವಿದ್ಯುತ್ ನಿಲುಗಡೆ, ಪಂಪ್‍ಗಳ ನಿರ್ವಹಣೆ ಹಾಗೂ 315 ಮಿ.ಮೀ. ಹೆಚ್.ಡಿ.ಪಿ. ಹಾಗೂ ಈ ಕೊಳವೆ ಮಾರ್ಗದಲ್ಲಿ ವಾಲ್ವ ನ ತುರ್ತು ದುರಸ್ತಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಕಲಬುರಗಿ ನಗರಕ್ಕೆ ಇದೇ ಏಪ್ರಿಲ್ 1 ಹಾಗೂ 2 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕಲಬುರಗಿ ನಗರದ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.