ಏ.1 ರಿಂದ ಕಲಬುರಗಿ-ತಿರುಪತಿ ವಿಮಾನ ಸೇವೆ

ಕಲಬುರಗಿ,ಮಾ.20: ಕಲಬುರಗಿಯಿಂದ ಜಾಗತಿಕ ಸುಪ್ರಸಿದ್ಧ ಯಾತ್ರಾಸ್ಥಳ ತಿರುಪತಿಗೆ ಏಪ್ರಿಲ್ 1 ರಿಂದ ಸ್ಟಾರ್ ಏರ್ ವಿಮಾನಸೇವೆ ಆರಂಭವಾಗಲಿದೆ.
ಸ್ಟಾರ್ ಏರ್ ವಿಮಾನ ಕಲಬುರಗಿಯಿಂದ ಸಂಜೆ 6.05 ಕ್ಕೆ ಹೊರಟು ತಿರುಪತಿಗೆ 7.20 ಕ್ಕೆ ತಲುಪಲಿದೆ.ಅದೇ ರೀತಿ ತಿರುಪತಿಯಿಂದ ಸಂಜೆ 4.30 ಕ್ಕೆ ಬಿಟ್ಟು 5.40 ಕ್ಕೆ ಕಲಬುರಗಿ ತಲುಪಲಿದೆ.
ಪ್ರತಿ ಸೋಮವಾರ,ಗುರುವಾರ,ಶುಕ್ರವಾರ,ಶನಿವಾರ ತಿರುಪತಿಗೆ ವಿಮಾನಸೇವೆ ಇರಲಿದೆ.ಈ ಹಿಂದೆ ಕಲಬುರಗಿಯಿಂದ ತಿರುಪತಿಗೆ ವಿಮಾನಯಾನ ಸೇವೆ ಪ್ರಾರಂಭವಾಗಿತ್ತಾದರೂ ಕಾರಣಾಂತರಗಳಿಂದ ಸೇವೆ ಸ್ಥಗಿತಗೊಂಡಿತ್ತು. ಈಗ ಮರು ಯಾನ ಆರಂಭವಾಗಿದ್ದಕ್ಕೆ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಲಬುರಗಿ-ಬೆಂಗಳೂರು ವಿಮಾನ ಯಾನ:
ಕಲಬುರಗಿಯಿಂದ ಪ್ರತಿ ಸೋಮವಾರ,ಮಂಗಳವಾರ,ಬುಧವಾರ,ಶನಿವಾರ ರಾತ್ರಿ 8.40 ಕ್ಕೆ ಬಿಟ್ಟು 9.50 ಕ್ಕೆ ಬೆಂಗಳೂರು ತಲುಪಲಿದೆ.ಬೆಂಗಳೂರಿನಿಂದ ರಾತ್ರಿ 7 ಕ್ಕೆ ಬಿಟ್ಟು 8.10 ಕ್ಕೆ ಕಲಬುರಗಿ ತಲುಪುವದು. ಇನ್ನೊಂದು ವಿಮಾನ ಪ್ರತಿ ಸೋಮವಾರ,ಬುಧವಾರ,ಶುಕ್ರವಾರ ಕಲಬುರಗಿಯಿಂದ ಮಧ್ಯಾಹ್ನ 2.55 ಕ್ಕೆ ಬಿಟ್ಟು 4.20 ಕ್ಕೆ ಬೆಂಗಳೂರು ತಲುಪುವದು.ಬೆಂಗಳೂರಿನಿಂದ 12.50 ಕ್ಕೆ ಹೊರಟು 2.25 ಕ್ಕೆ ಕಲಬುರಗಿಗೆ ಬಂದು ತಲುಪುವದು.