ಏ.೬ ರಿಂದ ಕರುಣಾಟ್ರಸ್ಟ್ ನಿಂದ ಮಜ್ಜಿಗೆ- ನೀರು ವಿತರಣೆ

ದಾವಣಗೆರೆ.ಏ.೩: ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಏಪ್ರಿಲ್ ೬ರಿಂದ ಮೇ ೬ ವರೆಗೆ ಮಜ್ಜಿಗೆ ಹಾಗೂ ನೀರು ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿರು ಬೇಸಿಗೆಯಲ್ಲಿ ಮನೆಯಿಂದ ಹೊರ ಬಂದ ಸಾರ್ವಜನಿಕರ ದಾಹ ತೀರಿಸುವ ನಿಟ್ಟಿನಲ್ಲಿ ಮಜ್ಜಿಗೆಯನ್ನು ಕಳೆದ ೬ ವರ್ಷದಿಂದ ಸತತವಾಗಿ ನಗರದ ಹಲವೆಡೆ ವಿತರಿಸಲಾಗುತ್ತಿದೆ ಎಂದರು.ನಗರದ ಜಯದೇವ ವೃತ್ತ, ಚಿಗಟೇರಿ ಜಿಲ್ಲಾ ಆಸ್ಪತ್ರೆ, ಕೆ.ಆರ್. ಮಾರ್ಕೆಟ್ (ಹೆರಿಗೆ ಆಸ್ಪತ್ರೆ) ರಾಮ್ ಅಂಡ್ ಕೋ ವೃತ್ತದಲ್ಲಿ ನೀರು ಹಾಗೂ ಮಜ್ಜಿಗೆಯನ್ನು ವಿತರಿಸಲಾಗುವುದು. ಹಾಗೂ ಜೊತೆಗೆ  ಜ್ಞಾನದಾಸೋಹಕ್ಕಾಗಿ ಕೆಲವೊಂದು ಪುಸ್ತಕಗಳು, ಪೋಸ್ಟರ್ ಗಳನ್ನು  ಸಹ ನೀಡಲಾಗುತ್ತದೆ ಎಂದರು.ದಾನಿಗಳು ಮೇಲ್ಕಂಡ ನಾಲ್ಕು ಕಡೆಗಳಲ್ಲಿ ಒಂದು ದಿನದ ಮಜ್ಜಿಗೆ ಹಾಗೂ ನೀರನ್ನು ವಿತರಿಸಲು ೬೦೦೦ ರೂಪಾಯಿಗಳನ್ನು  ಹಾಗೂ ಒಂದು ಕಡೆಗೆ ಒಂದು ದಿನದ ಮಜ್ಜಿಗೆ ಮತ್ತು ನೀರಿನ ವಿತರಣಾ ಖರ್ಚು ೧೫೦೦ ರೂಪಾಯಿಗಳಾಗಿದ್ದು,  ದಾನಿಗಳು ಖರ್ಚು ಭರಿಸಬಹು ದು ಅಥವಾ ತಮಗೆ ಮನಸ್ಸಿಗೆ ಬಂದಷ್ಟು ಧನಸಹಾಯ ಮಾಡಬಹುದು ಎಂದು ಮಾಹಿತಿ ನೀಡಿದರು.ದಾನಿಗಳು ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ, ಅಕೌಂಟ್ ನಂಬರ್-೫೦೧೦೦೩೩೨೮೦೫೩೫೬, ಐಎಫ್ ಸಿ ಕೋಡ್ ಹೆಚ್ ಡಿಎಫ್ ಸಿ ೦೦೦೦೪೦೩ ಗೆ ಧನಸಹಾಯ ಮಾಡುವುದು. ಹೆಚ್ಚಿನ ಮಾಹಿತಿಗೆ ಮೊಬೈಲ್-೯೧೧೦೪೫೫೧೯೯, ೯೫೩೮೦೨೪೪೨೨ ಸಂಪರ್ಕಿಸಲು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಮಂಜುಳ ಬಸವಲಿಂಗಪ್ಪ, ಎಂ.ಬಿ. ಮಧುಸೂದನ್, ಪ್ರೊ. ಎಂ. ಬಸವರಾಜ್ ಉಪಸ್ಥಿತರಿದ್ದರು.