ಏ. ೬ ಭೂಮಿಗೆ ಸಮೀಪ ಕ್ಷುದ್ರಗ್ರಹ

ನವದೆಹಲಿ,ಏ.೪- ೯೦ಆನೆಗಳ ಬೃಹತ್ ಗಾತ್ರದ ಕ್ಷುದ್ರಗ್ರಹ ಭೂಗ್ರಹದತ್ತ ಧಾವಿಸುತ್ತಿದ್ದು ಏಪ್ರಿಲ್ ೬ ರಂದು ಭೂಮಿಗೆ ಸಮೀಪ ಬರಲಿದೆ ಬರಲಿದೆ ಎಂದು ವಿಜ್ಞಾನಿಗಳು ಮಾಹಿತಿ ತಿಳಿಸಿದ್ದಾರೆ.
ಬೃಹತ್ ಬಾಹ್ಯಾಕಾಶ ಬಂಡೆ ಸುಮಾರು ೮೫ ರಿಂದ ೨೭೦ ಮೀಟರ್ ಎತ್ತರವನ್ನು ಹೊಂದಿದೆ.ಬಾಹ್ಯಾಕಾಶ ಶಿಲೆಯ ಅಗಾಧ ಗಾತ್ರದ ಹೊರತಾಗಿಯೂ, ಕಳೆದ ತಿಂಗಳು ಮಾರ್ಚ್ ರಂದು ಪತ್ತೆ ಮಾಡಲಾಗಿತ್ತು.
ಬೃಹತ್ ಆಕಾರದ ಕ್ಷುದ್ರಗ್ರಹ ಭೂ ಗ್ರಹದ ಸಮೀಪ ಬರುತ್ತಿರುವ ಹಿನ್ನೆಲೆಯಲ್ಲಿ ಭಯಪಡುವ ಅಗತ್ಯವಿಲ್ಲ ಏಕೆಂದರೆ ಅದು ಭೂಮಿಗೆ ೩,೦೦೦,೦೦೦ ಕಿಮೀಗಿಂತ ಹೆಚ್ಚು ಹತ್ತಿರವಾಗುವುದಿಲ್ಲ ಎಂದು ಹೇಳಲಾಗಿದೆ.
ಈ ವರ್ಷದ ಫೆಬ್ರವರಿ ಅಂತ್ಯದಲ್ಲಿ ಪತ್ತೆಯಾದ ಕ್ಷುದ್ರಗ್ರಹ ೨೦೨೩ ನಾಸಾ ವರದಿ ಆರಂಭದಲ್ಲಿ ಹೆಚ್ಚು ಆತಂಕ ಮೂಡಿಸಿತ್ತು ೨೩ ವರ್ಷಗಳ ನಂತರ ಅಂದರೆ ೨೦೪೬ರ ಫೆಬ್ರವರಿ ೧೪,ರಂದು ಭೂಮಿಗೆ ಬಹಳ ಹತ್ತಿರ ಬರಲಿದೆ.
ನಾಸಾ ಕ್ಷುದ್ರಗ್ರಹ ವಾಚ್‌ನ ಹೇಳಿಕೆ ೨೦೨೩ ಹೆಸರಿನ ಹೊಸ ಕ್ಷುದ್ರಗ್ರಹದ ಮೇಲೆ ನಿಗಾ ಇಟ್ಟಿದ್ದೇವೆ. ೨೦೪೬ ರಲ್ಲಿ ಭೂಮಿಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಕಡಿಮೆಯಾಗಿದೆ. ಆಗಾಗ್ಗೆ ಹೊಸ ವಸ್ತುಗಳು ಮೊದಲು ಪತ್ತೆಯಾದಾಗ, ಅನಿಶ್ಚಿತತೆ ಕಡಿಮೆ ಮಾಡಲು ಹಲವಾರು ವಾರಗಳ ಡೇಟಾವನ್ನು ತೆಗೆದುಕೊಳ್ಳುತ್ತದೆ. ಮತ್ತು ಭವಿಷ್ಯದ ವರ್ಷಗಳಲ್ಲಿ ಅವರ ಕಕ್ಷೆಗಳನ್ನು ಸಮರ್ಪಕವಾಗಿ ಊಹಿಸಿ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಕ್ಷುದ್ರಗ್ರಹದ ವ್ಯಾಸವನ್ನು ಸುಮಾರು ೫೦ ಮೀಟರ್‍ನಲ್ಲಿ ಪಟ್ಟಿ ಮಾಡಲಾಗಿದೆ ಸರಿಸುಮಾರು ಒಲಿಂಪಿಕ್ ಈಜುಕೊಳದ ಗಾತ್ರ. “ಕಕ್ಷೆಯ ವಿಶ್ಲೇಷಕರು ಕ್ಷುದ್ರಗ್ರಹ ೨೦೨೩ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತಾರೆ ಮತ್ತು ಹೆಚ್ಚಿನ ಡೇಟಾ ಬಂದಂತೆ ಭವಿಷ್ಯವಾಣಿಗಳನ್ನು ನವೀಕರಿಸುತ್ತಾರೆ” ಎಂದು ಹೇಳಲಾಗಿದೆ.
ಕ್ಷುದ್ರಗ್ರಹ ೨೦೨೩ ಭೂಮಿಯ ಮೇಲೆ ಪ್ರಭಾವ ಬೀರುವ ೬೦೦ ರಲ್ಲಿ ೧ ಸಾಧ್ಯತೆ ಹೊಂದಿದೆ ಎಂದು ನಾಸಾ ಯೋಜಿಸಿದೆ.