ಏ.೬ ಕ್ಕೆ ಕರುನಾಡ ಅರಸೊತ್ತಿಗಳು”  ಇತಿಹಾಸದ ಮಾಹಿತಿ ಪುಟದ ಬಿಡುಗಡೆ

ದಾವಣಗೆರೆ.ಏ.೪: ಚನ್ನವೀರಪ್ಪ ಯಳಮಲ್ಲಿ ಮೆಮೋರಿಯಲ್  ಟ್ರಸ್ಟ್ ದಾವಣಗೆರೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಬಸವರಾಜ್ ಯಳಮಲ್ಲಿ ಇವರ ಸಂಗ್ರಹದ  “ಕರುನಾಡ ಅರಸೊತ್ತಿಗಳು”  ಇತಿಹಾಸದ ಮಾಹಿತಿ ಪುಟದ ಬಿಡುಗಡೆ ಕಾರ್ಯಕ್ರಮವನ್ನು ಏ.೬ ಗುರುವಾರ ಬೆಳಗ್ಗೆ  ೧೧ಗಂಟೆಗೆ ನಗರದ ಕುವೆಂಪು  ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಬಸವರಾಜ್ ಯಳಮಲ್ಲಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟದಲ್ಲಿ ಶಕಪೂರ್ವ ೨೭೦ ರಿಂದ ನಮಗೆ ಸ್ವಾತಂತ್ರ್ಯ ಬಂದ ಸಾಮಾನ್ಯ ಶಕ ೧೯೪೭ ರ ವರೆಗಿನ ಸುಮಾರು ೨೨೧೭ ವರ್ಷಗಳ ಅವಧಿಯಲ್ಲಿ ಕರ್ನಾಟಕ ಪ್ರದೇಶವನ್ನು ಆಳಿದ ೧೩೦ ರಾಜವಂಶಗಳ ಆಡಳಿತಾಧಿ, ರಾಜಧಾನಿ ಮತ್ತು ರಾಜಕೀಯ ಕುರಿತು ಸಮಗ್ರ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಬಟ್ಟೆಯ ಮೇಲೆ ಮುದ್ರಿಸಿ ಪಟದ ರೂಪದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಗಿದೆ ಎಂದರು.ಕರ್ನಾಟಕ ರಾಜ್ಯದ ನಕ್ಷೆಯನ್ನು ಮಾಹಿತಿಗಾಗಿ ನೀಡಿದ್ದು, ಇನ್ನೊಂದು ನಕ್ಷೆಯಲ್ಲಿ ರಾಜ್ ವಂಶಗಳ ರಾಜಧಾನಿಗಳನ್ನು ಗುರುತಿಸಿ, ಕರ್ನಾಟಕ ಇತಿಹಾಸವನ್ನು ಒಂದೇ ನೋಟದಲ್ಲಿ ಸುಲಭವಾಗಿ, ಸರಳವಾಗಿ ಅರ್ಥವಾಗುವಂತೆ ರೂಪಿಸಿದ್ದಾರೆ ಎಂದು ತಿಳಿಸಿದರು.ಅಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ನ ಗೌರವಾಧ್ಯಕ್ಷ ಚನ್ನವೀರಪ್ಪ ಯಳಮಲ್ಲಿ ವಹಿಸಲಿಸಲಿದ್ದು, ಪುಟದ ಬಿಡುಗಡೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ವಾಮದೇವಪ್ಪಪಟದ ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಎವಿಕೆ ಕಾಲೇಜು ಪ್ರಾಂಶುಪಾಲ ಡಾ. ಬಿ.ಪಿ. ಕುಮಾರ್ ಹಾಗೂ ಸಪ್ರದ ಮಹಿಳಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಡಿ.ಆರ್. ನಟರಾಜ್ ಆಗಮಿಸುವರು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ, ಟ್ರಸ್ಟ್ ನ ಎನ್.ಡಿ. ಮಂಜುನಾಥ್, ಚನ್ನವೀರಪ್ಪ ಯಳಮಲ್ಲಿ, ಡಿ. ಶೇಷಾಚಲ, ನಂದೀಶ್ ಬಾದಾಮಿ ಉಪಸ್ಥಿತರಿದ್ದರು.