ಏ.೪ ಕ್ಕೆ ರವಿ ಹಂಜ್ ರ ಕೃತಿಗಳ ಲೋಕಾರ್ಪಣೆ

ದಾವಣಗೆರೆ.ಏ.೨;  ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂವಹನದ ಸಹಯೋಗದಲ್ಲಿ ರವಿ ಹಂಜ್ ಅವರ ದಾವಣಗೆರೆಯೇ ಮೈದಳೆದ ಕೃತಿ “ ರ ಠ ಈ ಕ ಹಾಗೂ ಇಂಡೋ – ಚೈನಾ ಸಾಮಾಜಿಕ ವಿಶ್ಲೇಷಣೆಯ ವಿಶಿಷ್ಟ ಪ್ರವಾಸ ಕಥನ . ‘ ಅಗಣಿತ ಅಲೆಮಾಲ ‘ ಕೃತಿಗಳ ಲೋಕಾರ್ಪಣೆ ಸಮಾರಂಭ ಏ.೪ ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ಜರುಗಲಿದೆ ಎಂದು ಲೇಖಕ ರವಿಹಂಜ್ ಹೇಳಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು 
ಏ.೪ ರಂದು ಬೆಳಗ್ಗೆ ೧೧ ಕ್ಕೆ ನಡೆಯುವ ಸಮಾರಂಭ ದಲ್ಲಿ  ಡಾ . ಶ್ರೀ ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸಲಿದ್ದಾರೆ.  ಹೂವಿನಹಡಗಲಿಯ ಡಾ. ಶಾಂತಮೂರ್ತಿ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ.ಕೃತಿಗಳ ಲೋಕಾರ್ಪಣೆಯನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತರು, ಚಲನಚಿತ್ರ ನಿರ್ದೇಶಕರಾದ ಬಿ.ಎಸ್  ಲಿಂಗದೇವರು ನೆರವೇರಿಸಲಿದ್ದಾರೆ. ಕೃತಿಗಳನ್ನು ಕುರಿತು ಮೈಸೂರಿನ ಹಿರಿಯ ಸಾಹಿತಿ ಪ್ರೊ . ಮಲೆಯೂರು ಗುರುಸ್ವಾಮಿ ಹಾಗೂ ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ . ಮೊರಬದ ಮಲ್ಲಿಕಾರ್ಜುನ  ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ . ಮಂಜುನಾಥ ಕುರ್ಕಿ , ಡಿ.ಎನ್ . ಲೋಕಪ್ಪ ,  ಜಿ . ನಾಗೇಂದ್ರಪ್ಪ , ದಾಕ್ಷಾಯಿಣಿ ಹುಡೇದ ,  ಸವಿತಾ ರಘು ಆಗಮಿಸಲಿದ್ದಾರೆ.ಜಾನಪದ ತಜ್ಞ ಡಾ.ಎಂ.ಜಿ ಈಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.ಕವಿ ಆನಂದ ಋಗ್ವೇದಿ ನಿರೂಪಣೆಯಲ್ಲಿ ಕಾರ್ಯಕ್ರಮ ಮೂಡಿಬರಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಪಾಪುಗುರು,ಆನಂದ ಋಗ್ವೇದಿ,ಸಿರಿಗೆರೆ ನಾಗರಾಜ್, ಸಿದ್ದೇಶ್ ಇದ್ದರು.