ಏ.೪ರಂದು ಕಣ ಕಣದೇ ಶಾರದೇ ಸಂಗೀತ ಕಾರ್ಯಕ್ರಮ

ರಾಯಚೂರು,ಏ.೨-ಕಣ ಕಣದೇ ಶಾರದೇ ಎನ್ನುವ ಶಿರ್ಷಿಕೆ ಅಡಿಯಲ್ಲಿ ಏ.೪ರಂದು ಚಿತ್ರಗೀತೆಗಳ ಗಾಯನ ಕಾರ್ಯಕ್ರಮವನ್ನು ಅಮ್ಮಿಕೊಳ್ಳಲಾಗಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಡಿ. ವೀರೇಶ್ ಕುಮಾರ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ ಚಾರಿಟೇಬಲ್ ಟ್ರಸ್ಟ್ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕ ಮತ್ತು ವಾಯ್ಸ್ ಅಫ್ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಏ.೪ರಂದು ಕಣ ಕಣ ಶಾರದೆ ಎನ್ನುವ ಚಿತ್ರಗೀತೆಗಳ ಗಾಯನ ಕಾರ್ಯಕ್ರಮವನ್ನು
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಮ್ಮಿಕೊಳ್ಳಲಾಗಿದ್ದು ಸುಮಾರು ೧೫ ಜನ ಗಾಯಕರು ಬಾಗವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು, ಆಶಿರ್ವಾದ ಫೌಂಡೇಷನ್ ಸಂಸ್ಥಾಪಕ ಹಾಗೂ ವೈದ್ಯರಾದ ಡಾ.ಬಸನಗೌಡ ಪಾಟೀಲ್ ನೆರವೇರಿಸಲಿದ್ದು, ಕಾರ್ಯಕ್ರಮಕ್ಕೆ ಪೂರ್ಣಿಮಾ ಇಂಟರ್ ನ್ಯಾಷನಲ್ ಶಾಲೆಯ ಸ್ಥಾಪಕ ಕೇಶವರೆಡ್ಡಿ, ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್, ಸಮಾಜ ಸೇವಕ ಬಸವರಾಜ ಕಳಸ ಸೇರಿದಂತೆ ಇನ್ನಿತರ ಗಣ್ಯರು ಆಗಮಿಸಲಿದ್ದು,
ಈ ಕಾರ್ಯಕ್ರಮವನ್ನು ಪ್ರತಿಭೆಯುಳ್ಳ ಯುವಕ ಯುವತಿಯರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿರಿಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಸಾಯಿಕಿರಣ ಆದೋನಿ, ಕಾರ್ಯಕ್ರಮದ ಆಯೋಜಕ ಕೀಬೋರ್ಡ್ ವಾದಕ ನರೇಂದ್ರ, ವೇಣುಗೋಪಾಲ, ವಾಯ್ಸ್ ಆಫ್ ರಾಯಚೂರು ಅಧ್ಯಕ್ಷ ಅಮರೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.