ಏ.೩೦ ಕ್ಕೆ ಪಂಚಮಸಾಲಿ ಸಮಾಜದ ಮುಖಂಡರ ಸಭೆ

ದಾವಣಗೆರೆ. ಏ.೨೪; ಕಾಂಗ್ರೆಸ್ ಬೆಂಬಲಿತ ಪಂಚಮಸಾಲಿ ಮುಖಂಡರ ಸಭೆಯನ್ನು ಏ.೩೦ ರಂದು‌ ಬೆಳಗ್ಗೆ ೧೦.೩೦ ಕ್ಕೆ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಕರೆಯಲಾಗಿದೆ‌ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ದಾಸೋಹ ಸಮಿತಿಯ ಮುಖಂಡ ಪ್ರಕಾಶ್ ಪಾಟೀಲ್ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು‌ ಈ ಸಭೆಯಲ್ಲಿ ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕು ಹಾಗೂ ಹರಪನಹಳ್ಳಿ ಕ್ಷೇತ್ರದ ಪಂಚಮಸಾಲಿ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ.ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಬೆಂಬಲಿಸುವಂತೆ ಮನವರಿಕೆ ಮಾಡಿಕೊಡಲಾಗುವುದು. ಅಂದಾಜು‌ ೨೫೦೦ ಮುಖಂಡರು‌ ಸಭೆಗೆ ಆಗಮಿಸಲಿದ್ದಾರೆಂದರು.ಮೇ.೭ ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ‌ಪರವಾಗಿ‌  ಪ್ರಚಾರ ಕೈಗೊಂಡಿದ್ದೇವೆಂದರು.ಕಾಂಗ್ರೆಸ್ ‌ಮುಖಂಡ ಹೆಚ್.ಎಸ್ ನಾಗರಾಜ್ ಮಾತನಾಡಿ ಎಲ್ಲಾ ಹಿತೈಷಿಗಳ ಸಮ್ಮುಖದಲ್ಲಿ ಕಾಂಗ್ರೆಸ್ ‌ಪಕ್ಷ ಸೇರ್ಪಡೆಯಾಗಿದ್ದೇನೆ.ನಮ್ಮ ಗುರಿ‌ನಮ್ಮ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ಗೆಲ್ಲಿಸುವುದಾಗಿದೆ ಎಂದರು.ಲಿಂಗಾಯತ ಸಮಾಜದಲ್ಲಿ ಪಂಚಮಸಾಲಿಯವರೇ ಅತೀ ಹೆಚ್ಚು ಸಂಖ್ಯೆಯಲ್ಲಿದ್ದಾರೆ.ಆದ್ದರಿಂದ ಕಾಂಗ್ರೆಸ್ ಬೆಂಬಲಿತ ಸಮಾಜ ಬಾಂಧವರೊಂದಿಗೆ ಸಭೆ ನಡೆಸಲಾಗುವುದು ಎಂದರು.ಈ‌ ಹಿಂದೆಯೂ ಬಿಜೆಪಿ ಗೆಲುವಿಗೆ ಸಮಾಜದ ದೊಡ್ಡ ಕೊಡುಗೆಯೇ ಇದೆ.ಈ ಬಗ್ಗೆ ನಮ್ಮ ಸಮಾಜದ ಎರಡೂ‌ಗುರುಗಳು ಮನವರಿಕೆ ಮಾಡಿಕೊಟ್ಟಿದ್ದಾರೆ.ಸಮಾಜದ ಒಳಿತಿಗಾಗಿ ಕಟ್ಟಕಡೆಯ ವ್ಯಕ್ತಿಗೆ ಅವಕಾಶಗಳು ಸಿಗಬೇಕು ಅದಕ್ಕಾಗಿ ಕಾಂಗ್ರೆಸ್ ಬೆಂಬಲಿಸಬೇಕು‌ ಅದನ್ನು ಮನವರಿಕೆ ಮಾಡಿಕೊಡಲು ಸಭೆ ಕರೆಯಲಾಗಿದೆ ಎಂದರು.ಬಿಜೆಪಿಯವರ ನಡವಳಿಕೆಗೆ ಜನತೆ ಬೇಸತ್ತಿದ್ದಾರೆ.ಪಂಚಮಸಾಲಿಗಳಿಗೆ ಬಿಜೆಪಿ ವಿಶ್ವಾಸ ದ್ರೋಹ ಮಾಡಿದೆ.ಸಮಾಜದ ಏಳಿಗೆಗಾಗಿ ಸಮಾಜದ ಅಭಿವೃದ್ಧಿಗಾಗಿ ಕೈ ಬಲಪಡಿಸಬೇಕು ಎಂದು‌ ಕರೆನೀಡಿದರು.ಸುದ್ದಿಗೋಷ್ಠಿಯಲ್ಲಿ ಹಾಲೇಶ್ ಗೌಡ್ರು,ಬೇಲೂರು ಅಜ್ಜಪ್ಪ,ಕಾಯಿಪೇಟೆ ಹಾಲೇಶ್ ಉಪಸ್ಥಿತರಿದ್ದರು.