ಏ.೩ರಂದು ಪ್ರಥಮ ಜಾನಪದ ಸಮ್ಮೇಳನ-ಡಾ ಶರಣಪ್ಪ

ರಾಯಚೂರು.ಮಾ.೨೭-ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜಾನಪದ ಸಮ್ಮೇಳನ,ಲಿಂಗಸೂಗೂರು ತಾಲೂಕು ಮಹಿಳಾ ಘಟಕದ ಪದಗ್ರಹಣ,ಐದು ಕೃತಿಗಳ ಲೋಕಾರ್ಪಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏ.೩ರಂದು ನಡೆಯಲಿದೆ ಎಂದು ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಶರಣಪ್ಪ ಅನೆಹೊಸೂರು ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಜಿಲ್ಲಾಘಟಕ, ಮಹಿಳಾ ಘಟಕ, ಲಿಂಗಸೂಗುರು ತಾಲೂಕು ಘಟಕದ ವತಿಯಿಂದ ಏ.೩ರಂದು ಲಿಂಗಸೂಗುರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅಮ್ಮಿಕೊಳ್ಳಲಾಗಿದ್ದು, ಈ ಸಮ್ಮೇಳನದಲ್ಲಿ ಲಿಂಗಸುಗೂರು ತಾಲೂಕು ಮಹಿಳಾ ಘಟಕದ ಪದಗ್ರಹಣ, ೫ ಕೃತಿಗಳ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಿಗ್ಗಾಂವಿ ಜಾನಪದ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ಡಿ.ಬಿ ನಾಯಕ ನೆರವೇರಿಸಲಿದ್ದು, ಕಲಾಮೇಳದ ಉದ್ಘಾಟನೆಯನ್ನು ಸಂಸದ ರಾಜಾ ಅಮರೇಶ್ವರ ನಾಯಕ ನೆರವೇರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಶಾಸಕರಾದ ಡಿ.ಎಸ್ ಹೂಲಗೇರಿ, ಅಮರೇಗೌಡ ಪಾಟೀಲ್ ಬಯ್ಯಾಪೂರ, ಸಮ್ಮೇಳನದ ಸರ್ವದ್ಯಕ್ಷರಾಗಿ ಸಾಹಿತಿ ಲಿಂಗನ್ಣ ಗಾಣದಾಳ ವಹಿಸಲಿದ್ದಾರೆ.
ಶಾಸಕ ಶಿವರಾಜ ಪಾಟೀಲ್, ಮಹಂತಗೌಡ ಪಾಟೀಲ್ ಸೇರಿದಂತೆ ಹಲವು ಗಣ್ಯರು ಆಗಮಿಸಲಾಗಿದ್ದಾರೆ ಎಂದು ತಿಳಿಸಿದರು.
ಇನ್ನೂ ಕಾರ್ಯಕ್ರಮದಲ್ಲಿ ಬಯಲಾಟ,ಬುರ್ರ ಕಥೆ, ಸೋಬಾನೆ ಹಾಡು, ತತ್ವಪದ, ಕೋಲಾಟ ಹಾಗೂ ತಂತಿಹಾಡು, ಕಂಸಾಳೆಯಂತಹ ಜಾನಪದ ಕಲೆಗಳನ್ನು ಪ್ರದರ್ಶಿಸಲಾಗುತ್ತದೆ. ಮೊದಲ ಹೆಜ್ಜೆ, ಸಾಹಿತ್ಯ ಮತ್ತು ಚಳುವಳಿ, ವೈಶಾಖ ಪೂರ್ಣಿಮೆ ಗಜಲುಗಳು, ಪತ್ರಿಕಾ ತಲೆಬರಹ, ಹಾಗೂ ನವರಸ ಕಥೆಗಳು ಎಂಬ ೫ ಕೃತಿಗಳನ್ನು ಲೋಕಾರ್ಪಣೆ ಮಾಡಲಾಗುವುದು. ಹಾಗೂ ಜಾನಪದ ಸಾಹಿತ್ಯದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ ಹಾಗೂ ವಿಶೇಷವಾಗಿ ಜಾನಪದ ಕಲಾವಿದ ಮತ್ತು ಚಿತ್ರನಟ ಆಗಮಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಮ್ಮ ಪಟ್ಟದಕಲ್, ಲಕ್ಷ್ಮೀದೇವಿ, ಡಾ.ಅರುಣಾ ಹಿರೆಮಠ,ಬಿ.ಬಸವರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.