ಏ.೨೭: ಶ್ರೀ ಮಹರ್ಷಿ ಭಗೀರಥ ಜಯಂತಿ ಆಚರಣೆ

ರಾಯಚೂರು,ಏ.೨೦-ಏಪ್ರಿಲ್ ೨೭ ರಂದು ಶ್ರೀ ಮಹರ್ಷಿ ಭಗೀರಥ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಭಗೀರಥ ಉಪ್ಪಾರ ಸಮಾಜ ಸಂಘ ಪ್ರಧಾನ ಕಾರ್ಯದರ್ಶಿ ಆದಿರಾಜ ಆದೋನಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ನಗರಸಭೆ ಇವರ ಸಹಯೋಗದಲ್ಲಿ ನಗರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೯ ಗಂಟೆಗೆ ಜಯಂತಿಯನ್ನು ಆಯೋಜಿಸಲಾಗಿದೆ ಎಂದು ಅವರು,ಅಖಂಡ ಭಾರತ ಭೂಮಿಯಲ್ಲಿ ಶ್ರೀ ಮಹರ್ಷಿ ಭಾಗೀರಥ ಮಹಾರಾಜರಾಗಿ ಆಲಿ ಹೋಗಿದ್ದಾರೆ.ಶ್ರೀ ಭಗೀರಥ ತಮ್ಮ ಪೂರ್ವರ ಶಾಪ ವಿಮೋಚನೆಗಾಗಿ ಚಿಂತಕ್ರಾಂತರಾಗಿ ಇರುವಾಗ ಇವರಿಗೆ ದೈವ ಸಂದೇಶವಾಗುತ್ತದೆ.ಅದರಂತೆ ಒಂಟಿಕಾಲಲ್ಲಿ ನಿಂತು ಶಿವನ ಬಗ್ಗೆ ಭಕ್ತಿಯಿಂದ ತಪಸ್ಸು ಮಾಡುತ್ತಾನೆ ಎಂದರು.
ಶ್ರೀ ಮಹರ್ಷಿ ಭಗೀರಥ ಜಯಂತಿಗೆ ಸಮಾಜದ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎನ್. ಬುಗ್ಗಾ ರೆಡ್ಡಿ, ಮಾಣಿಕ್ಯಪ್ಪ,ದೇವಣ್ಣ ನವಲಕಲ್ ಇದ್ದರು.