ಏ.೨೭ ಕ್ಕೆ ಸ್ಲಂ ಜನರ ಮತ ಜಾಗೃತಿ ಸಮಾವೇಶ

ಸಂಜೆವಾಣಿ ವಾರ್ತೆ

ದಾವಣಗೆರೆ.ಏ.೧೮: ದೇಶದ ಸಾರ್ವಭೌಮತ್ವದ ರಕ್ಷಣೆ, ಸಂವಿಧಾನದ ರಕ್ಷಣೆ ಮಾಡುವ ಅಭ್ಯರ್ಥಿಗೆ ನಾವು ಮತ ನೀಡಲಿದ್ದೇವೆ ಎಂದು ಸ್ಲಂ ಜನಾಂದೋಲನ ಹಾಗೂ ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆ ಜಿಲ್ಲಾ ಗೌರವಾಧ್ಯಕ್ಷ ಎಸ್.ಎಲ್.ಆನಂದಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಲೋಕಸಭಾ ಚುನಾವಣೆ -೨೦೨೪ “ಸ್ಲಂ ಜನರ ಪ್ರಣಾಳಿಕೆ” ಬಿಡುಗಡೆ ಮಾಡಿ ಮಾತನಾಡಿದ ಅವರು, ಕೊಳಗೇರಿಯಲ್ಲಿ ನಿವಾಸಿಗಳು ಯಾರಿಗೆ ಮತ ನೀಡಬೇಕೆಂದು ಚರ್ಚಿಸಲಾಗಿದೆ. ಪ್ತಸ್ತುತ ಪವಿತ್ರ ಸಂವಿಧಾನಕ್ಕೆ ಧಕ್ಕೆಯಾಗುತ್ತಿದೆ, ದೇಶದಲ್ಲಿ ಏಕತೆ ದೂರವಾಗುತ್ತಿದೆ, ಆದ್ದರಿಂದ ಭಾರತ ಸಂವಿಧಾನ ಮತ್ತು ದೇಶ ರಕ್ಷಣೆಗಾಗಿ ಸ್ಲಂ ಜನರ ಮತ ಎಂಬ ಜಾಗೃತಿ ಸಮಾವೇಶವನ್ನು ಇದೇ ಏ.೨೭ ರಂದು ಹಮ್ಮಿಕೊಳ್ಳಲಾಗಿದೆ ಎಂದರು.ಸಂಸತ್ ಸದಸ್ಯರ ನಿಧಿಯಲ್ಲಿ ಸ್ಲಂಗಳ ಅಭಿವೃದ್ಧಿಗೆ ಹಣ ಮೀಸಲಿಡಲಿಬೇಕು, ನಿವೇಶನ ರಹಿತರು ಹಾಗೂ ವಸತಿ ರಹಿತರಿಗೆ ನೀವೇಶನ/ ವಸತಿ ದೊರೆಯಲು ರಾಷ್ಟ್ರೀಯ ನಗರ ಲ್ಯಾಂಡ್ ಬ್ಯಾಂಕ್ ನೀತಿ ಜಾರಿಗೊಳಿಸಬೇಕು, ವಸತಿ ಹಕ್ಕು ಕಾಯಿದೆ ಜಾರಿ ಮಾಡಬೇಕು,ದೇಶದ ಎಲ್ಲಾ ಪ್ರಜೆಗಳಿಗೆ ಉಚಿತ ಮತ್ತು ಕಡ್ಡಾಯ ಚಿಕಿತ್ಸೆ ನೀಡುವ ಹೆಲ್ತ್ ಗ್ಯಾರೆಂಟಿಯನ್ನು ಜಾರಿಗೊಳೊಸಬೇಕು, ರೈಟ್ ಟು ಎಜುಕೇಶನ್ ಅರ್ಥಪೂರ್ಣಗೊಳಿಸಲು ಸಮಾನ ಶಿಕ್ಷಣ ಜಾರಿಗೊಳಿಸಿ ರಾಷ್ಟ್ರೀಯಾ ಶಿಕ್ಷಣ ನೀತಿಯನ್ನು ರದ್ದುಗೊಳಿಸಬೇಕು, ದೇಶದ ಎಲ್ಲಾ ನಾಗರೀಕರಿಗೆ ಉದ್ಯೋಗ ಭದ್ರತೆ ನೀಡಲು “ರಾಷ್ಟ್ರೀಯಾ ನಗರ ಉದ್ಯೋಗ ಖಾತ್ರಿ” ಯೋಜನೆ ಜಾರಿಗೊಳಿಸಬೇಕು ಮತ್ತು ಪ್ರತಿ ಕುಟುಂಬಕ್ಕೊಂದು ಸರ್ಕಾರಿ ಕೆಲಸ ನೀಡಬೇಕು, 1931ರ ನಂತರದಲ್ಲಿ ದೇಶದಲ್ಲಿ ಜಾತಿ ಜನಗಣತಿ ನಡೆದಿರುವುದಿಲ್ಲ, ಆದ್ದರಿಂದ ಜಾತಿವಾರು ಜನಗಣತಿಯನ್ನು ನಡೆಸಬೇಕು ಸೇರಿದಂತೆ ಹಲವು ಸ್ಲಂ ನಿವಾಸಿಗಳ ಸಾರ್ವತ್ರಿಕ ಬೇಡಿಕೆಗಳನ್ನು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರೇಣುಕ ಯಲ್ಲಮ್ಮ, ಎಂ.ಶಬ್ಬೀರ್ ಸಾಬ್, ಯೂಸುಫ್ ಸಾಬ್, ಬಾಲಪ್ಪ, ಮಂಜುಳಾ.ಜಂಶಿದ್ ಬಾನು, ಗೀತಮ್ಮ ಇತರರು ಇದ್ದರು.