
ದಾವಣಗೆರೆ. ಏ.೨೫; ಕಾಂಗ್ರೆಸ್ ಪಕ್ಷದ ದಕ್ಷಿಣವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಅವರನ್ನು ಬೆಂಬಲಿಸಿ ಜೆಡಿಎಸ್ ತೊರೆದು ಏ.೨೭ ರಂದು ಸಂಜೆ ೬ ಕ್ಕೆ ಮದೀನಾ ಸರ್ಕಲ್ ನಿಂದ
ಮೆರವಣಿಗೆ ಮೂಲಕ ತೆರಳಿ ಎಸ್ ಎಸ್ ಶಾದಿಮಹಲ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇವೆ ಎಂದು ಮುಖಂಡ ಯು.ಎಂ ಮನ್ಸೂರ್ ಅಲಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು ೫೦೦ ರಿಂದ ೧ ಸಾವಿರ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇವೆ ಎಂದರು.ಬಿಜೆಪಿ ಸರ್ಕಾರವನ್ನು ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ಗೆ ಬೆಂಬಲ ನೀಡಲಿದ್ದೇವೆ.ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್ ನ ರಾಜ್ಯ ನಾಯಕರು ಆಸಕ್ತಿ ತೋರದ ಕಾರಣಗಳಿಂದ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಅಯೂಬ್ ಪೈಲ್ವಾನ್,ದಿನೇಶ್ ಕೆ ಶೆಟ್ಟಿ, ನೌಷಾದ್,ದಾದಾಪೀರ್,ರಿಯಾಜ್ ಅಹಮ್ಮದ್, ಎಂ.ಆರ್. ಸಿದ್ದಿಕ್,ಅಸ್ಗರ್,ಜಾವೀದ್,ಅಲ್ತಾಫ್,ಮಹಮ್ಮದ್ ಅಲಿ ಉಪಸ್ಥಿತರಿದ್ದರು.