ಏ.೨೧ರಂದು ಸ್ವಾಭಿಮಾನಿ ಬೂತ್ ಸಮಾವೇಶ

ರಾಯಚೂರು, ಮಾ.೨೭-ಏ. ೨೧ರಂದು ನಡೆಯುವ ಸ್ವಾಭಿಮಾನಿ ಬೂತ್ ಸಮಾವೇಶ ಅಂಗವಾಗಿ ಇಂದು ನಗರದ ವಾರ್ಡ್ ನ ೩೩ ರಲ್ಲಿ ನಗರ ಮಂಡಲ ಅಧ್ಯಕ್ಷ ಬಿ.ಗೋವಿಂದ್ ಅವರ ನೇತೃತ್ವದಲ್ಲಿ ಸಭೆ ನಡೆಯಿತು.
ನಂತರ ಮಾತನಾಡಿದ ಅವರು ಬೂತ್ ಸಮಿತಿಗಳ ಕಾರ್ಯಕರ್ತರು ಸಮಾವೇಶಕ್ಕೆ ಆಗಮಿಸಬೇಕು ಹಾಗೂ ನಿಮ್ಮ ಬೂತ್ ಗಳಲ್ಲಿ ಪಕ್ಷವನ್ನು ಬಲಪಡಿಸಬೇಕೆಂದರು.
ನಗರ ಪ್ರಧಾನಕಾರ್ಯದಶಿ ಪ್ರದೀಪ್ ಸಾನಬಾಳ ಅವರು ಪೇಜ್ ಪ್ರಮುಖ ಹಾಗೂ ಬೂತ್ ಸಮಿತಿ ಸಂಘಟನೆ ಮಹತ್ವ ತಿಳಿಸಿದರು.
ಶಕ್ತಿ ಕೇಂದ್ರ ಸಂಚಾಲಕರು ಹಾಗೂ ಮಾಜಿ ನಗರ ಸಭೆ ಸದಸ್ಯ ಶಂಶಾಲಪ್ಪ ಅವರು ಕಾರ್ಯಕರ್ತರನ್ನು ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಧಾಕಾರ್ಯದರ್ಶಿ ಹಾಗೂ ಆರ್. ಡಿ. ಎ. ಸದಸ್ಯ ಎ. ಚಂದ್ರಶೇಖರ, ಪಕ್ಷದ ಹಿರಿಯ ಮುಖಂಡರಾದ ಮಲ್ಲಣ್ಣ ಹಾಗೂ ಸಿದಪ್ಪ ಪೂಜಾರಿ, ಸಣ್ಣ ಯು. ಮಲ್ಲೇಶಪ್ಪ, ಸೋಷಿಯಲ್ ಮೀಡಿಯಾ ಸಂಚಾಲಕರಾದ ನವೀನ ರೆಡ್ಡಿ ಅವರು ಭಾಗವಹಿದರು, ಹನುಮೇಶ ಅವರು ವಂದನಾರ್ಪಣೆಯನ್ನು ಮಾಡಿದರು ಕಾರ್ಯಕ್ರಮದಲ್ಲಿ ವಾರ್ಡ ೩೩ ರ ಬೂತ್ ಕಾರ್ಯಕರ್ತರು ಭಾಗವಹಿಸಿದರು.