ಏ. ೧ ಸಂತರ, ದಾಸೋಹ ದಿನ ಸಂತಸ

ವಿಜಯಪುರ.ಏ೨: ಶರಣರಲ್ಲಿ ಹಾಗೂ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಿಗೆ ಹರಿಕಾರರಾಗಿದ್ದಂತಹ ಶಿವಕುಮಾರ ಸ್ವಾಮೀಜಿಗಳವರ ಜಯಂತಿ ಉತ್ಸವವು ಇದೀಗ ಮೂರ್ಖರ ದಿನವನ್ನು ಮರೆಸಿ ಸಂತರ ಹಾಗೂ ದಾಸೋಹದ ದಿನವನ್ನಾಗಿ ರಾಜ್ಯದಾದ್ಯಂತ ಆಚರಿಸುತ್ತಿರುವ ಬಗ್ಗೆ ಪುರಸಭಾ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎಂ ಸತೀಶ್ ಕುಮಾರ್ ಸಂತಸ ವ್ಯಕ್ತಪಡಿಸಿದರು.
ಅವರು ಇಲ್ಲಿನ ಗಾಂಧಿ ಚೌಕದಲ್ಲಿ ಮಹಂತಿನ ಮಠ, ನಗರ್ತ ಯುವಕ ಸಂಘ. ನಗರ್ತ ಮಹಿಳಾ ಸಂಘ, ಶ್ರೀನಗರೇಶ್ವರ ಸ್ವಾಮಿ ರಥೋತ್ಸವ ಸಮಿತಿ ಮತ್ತು ಇತರೆ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ತ್ರಿವಿದ ದಾಸೋಹಿಗಳು, ಜಂಗಮೂರ್ತಿಗಳು, ನಡೆದಾಡುವ ದೇವರೆಂದು ಖ್ಯಾತಿಗಳಿಸಿದಂತಹ ಸಿದ್ದಗಂಗಾ ಮಠಾಧ್ಯಕ್ಷರಾಗಿದ್ದದಂತಹ ಡಾಕ್ಟರ್ ಶ್ರೀ ಶಿವಕುಮಾರ ಮಹಾ ಸ್ವಾಮಿಗಳವರ ೧೧೭ನೇ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಶ್ರೀಗಳವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಪುಷ್ಪ ನಮನ ಮಾಡಿ ಮಾತನಾಡುತ್ತಿದ್ದರು.
ವಸತಿ, ದಾಸೋಹ, ಶಿಕ್ಷಣ ಮೂರು ವಿಧವಾದ ತ್ರಿವಿಧ ದಾಸೋಹಗಳಿಗೆ ಹೆಸರಾದ ಸಿದ್ದಗಂಗೆಯ ಮಠ ಇಂದಿಗೂ ಸಾಕಷ್ಟು ಪರಿವರ್ತನೆಗಳೊಂದಿಗೆ ನಡೆದುಕೊಂಡು ಹೋಗುತ್ತಿದ್ದು ಇದೀಗ ಮೂರ್ಖರ ದಿನ ಎಂದು ಆಚರಿಸುಲಾಗುತ್ತಿದ್ದ ಏಪ್ರಿಲ್ ಒಂದನೇ ದಿನಾಂಕ ಇದೀಗ ಎಲ್ಲರೂ ಸಂತರ ಹಾಗೂ ದಾಸೋಹದ ದಿನವನ್ನಾಗಿ ಆಚರಿಸುತ್ತಿರುವ ಬಗ್ಗೆ ಹೆಮ್ಮೆಯಾಗಿದೆ ಎಂದು ಇದೊಂದು ಬದಲಾವಣೆಯ ಪರ್ವ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಹಾಂತಿನ ಮಠದ ಅಧ್ಯಕ್ಷರಾದ ಎಸ್ ಪುನೀತ್ ಕುಮಾರ್, ಕಾರ್ಯದರ್ಶಿ ವಿ ವಿಶ್ವನಾಥ್, ಖಜಾಂಚಿ ಮಧು,ನಿರ್ದೇಶಕರಾದ ಸಿ. ವಿಜಯರಾಜ್, ನಳಿನಿ ಶಾಂತಕುಮಾರ್, ವಿ. ಬಸವರಾಜ್, ಎನ್. ಪುನೀತ್, ಸುರೇಶ್ ಬಾಬು, ನಗರ್ತ ಯುವಕ ಸಂಘದ ಮಾಜಿ ಅಧ್ಯಕ್ಷರುಗಳಾದ ಸಿ ಭಾಸ್ಕರ್, ಪಿ ಮುರಳಿಧರ್, ಮಂಜುನಾಥ್, ಬೇಕರಿ ಆನಂದಪ್ಪ, ಸಿ ಚಂದ್ರಕುಮಾರ್, ಕೆ ಮುರಳಿಧರ್, ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಮ ಜಯದೇವ್, ಮತ್ತಿತರರು ಉಪಸ್ಥಿತರಿದ್ದರು.