ಏ‌.೧೬ ರಂದು ಹೊಮಿಯೋಪಥಿ ವಿಚಾರ ಸಂಕಿರಣ -2023

ದಾವಣಗೆರೆ.ಏ.೧೩: ಹೋಮಿಯೋಪಥಿ ವೈದ್ಯಕೀಯ ಸಂಘ , ದಾವಣಗೆರೆ ಹಾಗೂ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ಮತ್ತು ಲಯನ್ಸ್ ಕ್ಲಬ್ , ದಾವಣಗೆರೆ ಸಹಭಾಗಿತ್ವದಲ್ಲಿ ದಾವಣಗೆರೆ ಹೊಮಿಯೋಪಥಿ ವಿಚಾರ ಸಂಕಿರಣ -2023 ” , ಹಾಗೂ ಹೋಮಿಯೋಪಥಿ ಪಿತಾಮಹ ಫೆಡರಿಕ್ ಕ್ರಿಶ್ಚಿಯನ್ ಸ್ಯಾಮುಯಲ್ ಹಾನಿಮನ್‌ ಅವರ 268 ನೇಯ ಜನ್ಮದಿನಾಚರಣೆಯನ್ನು ಏ.೧೬ ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬಾಪೂಜಿ ಬಿಐಇಟಿ – ಎಂಬಿಎ ಕಾಲೇಜಿನ ಸಭಾಂಗಣದಲ್ಲಿ ಆಯೋಚಿಸಲಾಗಿದೆ ಎಂದು ವಿಚಾರ ಸಂಕಿರಣದ ಸಂಚಾಲಕರಾದ ಡಾ. ಜಿ.ಎಸ್. ಗಿರೀಶ್  ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಎಸ್. ಕೇರ್ ಟ್ರಸ್ಟಿ ಡಾ.  ಪ್ರಭಾ ಮಲ್ಲಿಕಾರ್ಜುನ್ ನೆರವೇರಿಸಲಿದ್ದು,  ಮುಖ್ಯ ಅತಿಥಿಗಳಾಗಿ ಕರ್ನಾಟಕ ಹೊಮಿಯೋಪಥಿ ಮಂಡಳಿ , ಬೆಂಗಳೂರು ಚುನಾಯಿತ ಸದಸ್ಯ ಡಾ. ವೀರಬ್ರಹ್ಮಚಾರಿ ಆಗಮಿಸಲಿದ್ದಾರೆ  ಎಂದರು.ಗೌರವಾನ್ವಿತ ಅತಿಥಿಗಳಾಗಿ  , ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ , ವ್ಯವಸ್ಥಾಪಕ ಮಾಲೀಕರಾದ ಬಿ.ಸಿ. ಶಿವಕುಮಾರ್, ಲಯನ್ಸ್ ಅಧ್ಯಕ್ಷ   ಹಾಗೂ ಪಿಕಾಕ್ ಗ್ರೂಪ್ ಆಫ್ ಕಂಪನೀಸ್ ವ್ಯವಸ್ಥಾಪಕ ನಿರ್ದೇಶಕ  ವ್ಯವಸ್ಥಾಪಕರಾದ ಎನ್.ಆರ್. ನಾಗಭೂಷಣ್ ರಾವ್,  ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಹೊಮಿಯೋಪಥಿ ವೈದ್ಯಕೀಯ ಸಂಘದ ಅಧ್ಯಕ್ಷ ಜಿ.ಎಸ್. ಮಾವಿಶೆಟ್ಟರ್  ವಹಿಸಲಿದ್ದಾರೆ ಎಂದರು.ಅಂದು ಸಂಜೆ  ೪.೩೦ ಕ್ಕೆ ನಡೆಯುವ ಸಮಾರೋಪ ಕಾರ್ಯಕ್ರಮಕ್ಕೆ ಆಯುಶ್ ವಿಭಾಗ (ಹೋಮಿಯೋಪಥಿ) ಕರ್ನಾಟಕ ಸರ್ಕಾರ , ಬೆಂಗಳೂರು  ಇದರ ಉಪನಿರ್ದೇಶಕರಾದ ಡಾ. ಅಶ್ವತ್ಥ್ ನಾರಾಯಣ ಹಾಗೂ  ಎಮ್.ಪ್ರಕಾಶ್ ಕುಮಾರ್ ವಿಶ್ರಾಂತ ಜಂಟಿ ನಿರ್ದೇಶಕರು ವಿಭಾಗ ( ಹೊಮಿಯೋ ) ಕರ್ನಾಟಕ ಸರ್ಕಾರ , ಬೆಂಗಳೂರು ಆಗಮಿಸಲಿದ್ದಾರೆ ಅಧ್ಯಕ್ಷತೆಯನ್ನು ಹೊಮಿಯೋಪಥಿ ವೈದ್ಯಕೀಯ ದಾವಣಗೆರೆಯ ಅಧ್ಯಕ್ಷರಾದ ಡಾ . ಬಿ.ಎಫ್.ಮಾವಿಶೆಟ್ಟರ್‌ ವಹಿಸಲಿದ್ದಾರೆ ಎಂದರು.ವೈಜ್ಞಾನಿಕ ವಿಚಾರ ಮಂಡನೆಯನ್ನು  ಖ್ಯಾತ ಮನೋವೈದ್ಯ ಡಾ . ಸಿ.ಆರ್.ಚಂದ್ರಶೇಖರ್‌ , ಬೆಂಗಳೂರು ಹಾಗೂ ಮಂಗಳೂರಿನ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದ ಮನೋರೋಗ ವಿಭಾಗದ ಮುಖ್ಯಸ್ಥ ಡಾ . ಯು.ಕೆ. ಗಿರೀಶ್ ನಾವಡ ಮಾಡಲಿದ್ದಾರೆ. ಮನಸ್ಸು ಮೆದುಳು ಹಾಗೂ ಸಾಮಾನ್ಯ ಮಾನಸಿಕ ಖಾಯಿಲೆಗಳು , ಇದರ ಚಿಕಿತ್ಸೆ , ಸಾಮಾನ್ಯ ಮಾನಸಿಕ ಖಾಯಿಲೆಗಳು , ಅದಕ್ಕೆ ಹೊಮಿಯೋಪಥಿಯಲ್ಲಿ ಡಾ. ಹಾನಿಮನ್ ರ ಪ್ರಕಾರದ ಪರಿಹಾರದ ವಿಚಾರವಾಗಿ ಮಂಡಳಿಗಳು ನಡೆಯಲಿದೆ ಎಂದರು.ವಿಚಾರ ಸಂಕಿರಣಕ್ಕೆ ಕರ್ನಾಟಕದ ಎಲ್ಲಾ ಭಾಗಗಳಿಂದ ಸುಮಾರು 25೦  ಕ್ಕೂ ಹೆಚ್ಚು ಹೊಮಿಯೋಪಥಿ ವೈದ್ಯರು ಆಗಮಿಸುವ ನಿರೀಕ್ಷೆಯಿದೆ , ಜನಸಾಮಾನ್ಯರಿಗೂ ಈ ವಿಚಾರ ಸಂಕಿರಣದಲ್ಲಿ ಭಾಗವಹಿಸುವುದಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ . ಆಸಕ್ತಿಯುಳ್ಳ ವೈದ್ಯರು ಹಾಗು ಜನಸಾಮಾನ್ಯರು ತಮ್ಮ ಹೆಸರನ್ನು ನೊಂದಾಯಿಸಿ ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಬಹುದಾಗಿದೆ. ವಿವರಗಳಿಗೆ ಡಾ. ಎಸ್.  ರಂಗರಾಜನ್: 8073369865 ರವರನ್ನು ಸಂಪರ್ಕಿಸಲು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ, ಸಂಘದ ಅಧ್ಯಕ್ಷ ಡಾ. ಜಿ.ಎಫ್. ಮಾವಿಶೆಟ್ಟರ್, ಕಾರ್ಯದರ್ಶಿ ಡಾ. ಎ.ಎನ್. ಸುಂದರೇಶ್, ಡಾ. ಕೆ.ಆರ್. ಶರತ್ ರಾಜ್ ಹಾಗೂ ಡಾ. ಹೆಚ್.ಎಸ್. ಪಾಂಡುರಂಗ ಉಪಸ್ಥಿತರಿದ್ದರು.