ಏ.೧೬ ರಂದು ಕೀರ್ತಿಶೇಷ ಪಿ.ಆರ್. ತಿಪ್ಪೇಸ್ವಾಮಿ ಜನ್ಮಶತಾಬ್ದಿ ಕಾರ್ಯಕ್ರಮ

ದಾವಣಗೆರೆ.ಏ.೪: ನಾಡಿನ ಕೀರ್ತಿಶೇಷ ಪಿ.ಆರ್. ತಿಪ್ಪೇಸ್ವಾಮಿ ಅವರ ಜನ್ಮ ಶತಾಬ್ದಿ ಕಾರ್ಯಕ್ರಮದ ಅಂಗವಾಗಿ ಏ. 16 ರಂದು ಶ್ರೀ ಶಿವಯೋಗಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ಚಿತ್ರಕಲಾ ಪರಿಷತ್ತು ಅಧ್ಯಕ್ಷ ಸದಾನಂದ ಹೆಗಡೆ ತಿಳಿಸಿದರು. ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಹರ್ತಿಕೋಟೆಯ ಪಿ.ಆರ್. ತಿಪ್ಪೇಸ್ವಾಮಿ ಅವರು ದಾವಣಗೆರೆ, ದೃಶ್ಯ ಕಲಾ ಮಹಾವಿದ್ಯಾಲಯದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಮಹಾನ್ ಕಲಾವಿದನ ಸ್ಮರಿಸುವ ಉದ್ದೇಶದಿಂದ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.ಎಲ್ ಕೆಜಿ, ಯುಕೆಜಿ, 1 ರಿಂದ 2 ನೇ ತರಗತಿ, ಮೂರರಿಂದ ಆರನೇ ತರಗತಿ, 7 ರಿಂದ 10 ನೇ ತರಗತಿ ಹೀಗೆ ನಾಲ್ಕು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಪ್ರತಿ ಗುಂಪಿಗೆ ಮೂರು ನಗದು ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ  ಒಂದು ಸಾವಿರ, ಎರಡನೇ ಬಹುಮಾನ 750, ತೃತೀಯ ಬಹುಮಾನ 500 ರೂಪಾಯಿ, ಪ್ರತಿ ಗುಂಪಿಗೆ ತಲಾ ಹತ್ತು ಸಮಾಧಾನಕರ ಬಹುಮಾನ ರೂಪದಲ್ಲಿ ಪ್ರಮಾಣಪತ್ರ ನೀಡಲಾಗುವುದು. ಎಲ್ಲ ಬಹುಮಾನಗಳನ್ನು ಏ.18 ರಂದು ನಡೆಯುವ ಪಿ.ಆರ್. ತಿಪ್ಪೇಸ್ವಾಮಿ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಗುವುದು. ಉಚಿತ ಪ್ರವೇಶವಕಾಶ ಇದೆ ಎಂದು ತಿಳಿಸಿದರು.ಹೆಚ್ಚಿನ ಮಾಹಿತಿಗಾಗಿ 94483 45584, 95387 32777, 99164 68579, 93434 02497 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.ಚಿತ್ರಕಲಾ ಪರಿಷತ್ತು ಕಾರ್ಯದರ್ಶಿ ಡಿ. ಶೇಷಾಚಲ್, ಶಾಂತಯ್ಯ ಪರಡಿಮಠ್, ಸಾಲಿಗ್ರಾಮ ಗಣೇಶ್ ಶೆಣೈ ಸುದ್ದಿಗೋಷ್ಠಿ‌ ಯಲ್ಲಿದ್ದರು.