ಏ.೧೬ ಕ್ಕೆ ರಾಜ್ಯಮಟ್ಟದ ಹೋಮಿಯೋಪಥಿ ವೈದ್ಯಕೀಯ ವಿಚಾರ ಸಂಕಿರಣ

ದಾವಣಗೆರೆ. ಏ.೪; ಹೋಮಿಯೋಪಥಿ ವೈದ್ಯಕೀಯ ಪದ್ದತಿಯ ಪಿತಾಮಹ ಡಾ.ಸ್ಯಾಮ್ಯುಯೆಲ್ಹಾ ನಿಮನ್ ಅವರ 268 ನೇ ಜನ್ಮದಿನ ಆಚರಣೆ ಮತ್ತು ರಾಜ್ಯಮಟ್ಟದ ವೈದ್ಯಕೀಯ ವಿಚಾರ ಸಂಕಿರಣವನ್ನು ಏ.೧೬ ರಂದು ಬೆಳಗ್ಗೆ ೯ ರಿಂದ ಸಂಜೆ ೫ ರವರೆಗೆ ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೋಮಿಯೋಪಥಿ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ.ಎ.ಎನ್ ಸುಂದರೇಶ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಾವಣಗೆರೆಯಲ್ಲಿ ನಡೆಯುತ್ತಿರುವ ವಿಚಾರ ಸಂಕಿರಣದಲ್ಲಿ ಖ್ಯಾತ ಮನೋ ತಜ್ಞರುಗಳಾದ ಡಾ.ಸಿ.ಆರ್ ಚಂದ್ರಶೇಖರ್ ಹಾಗೂ ಡಾ.ಯು.ಕೆ ಗಿರೀಶ್ ನಾವಡ ಉಪನ್ಯಾಸ ನೀಡಲಿದ್ದಾರೆ.ಏ.೧೬ ರಂದು‌ ಬೆಳಗ್ಗೆ ೧೦ ಕ್ಕೆ ಪ್ರಭಾ‌ಮಲ್ಲಿಕಾರ್ಜುನ್ ಅವರು ಸೆಮಿನಾರ್ ಗೆ ಚಾಲನೆ ನೀಡಲಿದ್ದಾರೆ.ರಾಜ್ಯದೆಲ್ಲೆಡೆಯಿಂದ ಸುಮಾರು‌ ೨೫೦ ಅಧಿಕ ವೈದ್ಯರುಗಳು ಆಗಮಿಸಲಿದ್ದಾರೆ ಹಾಗೂ‌ ಸಾರ್ವಜನಿಕರಿಗೂ ಸಹ ಅವಕಾಶ ಕಲ್ಪಿಸಲಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಡಾ.ವೀರಬ್ರಹ್ಮಚಾರಿ,ಡಾ.ಅಶ್ವಥ್ಥನಾರಾಯಣ,ಪ್ರಕಾಶ್ ಕುಮಾರ್ ಆಗಮಿಸಲಿದ್ದಾರೆ.ವಿಚಾರ ಸಂಕಿರಣದ ನಂತರ ಸಂಜೆ ೪ ರಿಂದ ೫ ಗಂಟೆಯವರೆಗೆ ಸಂವಾದ ಕಾರ್ಯಕ್ರಮ ಜರುಗಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಕೆ.ಎನ್ ಶರತ್ ರಾಜಗ,ಡಾ.ಜಿ.ಎಸ್ ಗಿರೀಶ್,ಡಾ.ಹೆಚ್.ಎಸ್ ಪಾಂಡುರಂಗ, ಪ್ರಭುದೇವ ಉಪಸ್ಥಿತರಿದ್ದರು.