ಏ.೧೫: ಬೃಹತ್ ಉಚಿತ ಆರೋಗ್ಯ ತಪಾಸಣಾ ಚಿಕಿತ್ಸಾ ಶಿಬಿರ

ರಾಯಚೂರು,ಏ.೧೪- ಪೂರ್ಣಿಮಾ ಆಯುರ್ವೇದ ವೈದ್ಯಕೀಯ ಕಾಲೇಜು, ಅಸ್ಪೆತ್ರೆ ಹಾಗೂ ಸಂಶೋಧನಾ ಕೇಂದ್ರ ವತಿಯಿಂದ ಏಪ್ರಿಲ್ ೧೫ ರಂದು ಬೆಳಿಗ್ಗೆ ೯-೩೦ ರಿಂದ ಸಂಜೆ ೪-೩೦ ರವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ.ಸಂತೋಷ ಕುಮಾರ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಈ ಶಿಬಿರದಲ್ಲಿ ಮಹಾವಿದ್ಯಾಲಯದ ಆಯುರ್ವೇದ ತಜ್ಞ ವೈದ್ಯರಿಂದ ಚಿಕಿತ್ಸೆಯ ಸೌಲಭ್ಯ ಇದ್ದು, ಮಧುಮೇಹ, ಅಸ್ತಮಾ, ಅಲರ್ಜಿ, ಚರ್ಮರೋಗಗಳು, ಬೊಜ್ಜುರೋಗ, ಥೈರಾಯಿಡ್, ಸಂಧಿರೋಗಗಳು, ಬಂಜೆತನ, ಗರ್ಭಕೋಶ ಸಮಸ್ಯೆಗಳು, ಮುಟ್ಟಿನ ಸಮಸ್ಯೆ, ಕಣ್ಣಿನ ಪೂರ, ಕಣ್ಣಿನ ತೊಂದರೆಗಳು, ಸಮೀಪ ಮತ್ತು ದೂರ ದೃಷ್ಟಿದೋಷ, ಕಿವಿ ತೊಂದರೆಗಳು, ತಲೆನೋವು, ಮೈಗ್ರೆನ್ ಸಮಸ್ಯೆಗಳು, ಮೂಲವ್ಯಾಧಿ, ಭಗಂದರ, ದೀರ್ಘಕಾಲದ ವಾಸಿಯಾಗದ ಗಾಯಗಳು, ಕಿಡ್ನಿ ಸ್ಟೋನ್, ಪುರುಷಗ್ರಂಥಿ ವೃದ್ಧಿ ಹಾಗೂ ಎಲ್ಲಾರೀತಿಯಾ ದಂತ ರೋಗಗಳನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಅವರು, ಪೂರ್ಣಿಮಾ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಚಿಕ್ಕ ಮಕ್ಕಳಿಗೆ ರೋಗ ನೀರೊಧಕ ಹೆಚ್ಚಿಸುವ ಹಾಗೂ ಉತ್ತಮ ಬೆಳವಣಿಗೆ ಹೊಂದಲು ಸ್ವರ್ಣ ಬಿಂದು ಪ್ರಾಶನ ನಿರಂತರವಾಗಿ ಹಾಕಲಾಗುತ್ತದೆ ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಡಾ.ಸುರೇಶರಾವ್ ದೇಶಪಾಂಡೆ, ಡಾ. ಹೇಮಂತ ಪಾಟೀಲ್, ಡಾ. ರೋಜಾ ಸೇರಿದಂತೆ ಇತರರು ಉಪಸ್ಥಿತರಿದ್ದರು.