ಏ.೧೪: ಶ್ರೀಮಂತ ಚಿತ್ರ ಬಿಡುಗಡೆ

ರಾಯಚೂರು,ಮಾ.೨೩- ಸೋನುಸೂದ್ ಮುಖ್ಯಭೂಮಿಕೆಯ ಶ್ರೀಮಂತ ಕನ್ನಡ ಚಲನಚಿತ್ರವು ಏಪ್ರಿಲ್ ೧೪ಕ್ಕೆ ಬಿಡುಗಡೆಯಾಗಲಿದ್ದು, ಚಿತ್ರ ವೀಕ್ಷಿಸಿ ಪ್ರೋತ್ಸಾಹ ನೀಡಬೇಕು ಎಂದು ಚಿತ್ರದ ಸಹ ನಿರ್ದೇಶಕ ಶಿವರಾಜ ದಳವಾಯಿ ಮನವಿ ಮಾಡಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಮಾತನಾಡಿ,ನಿರ್ದೇಶಕ ಟಿ.ಕೆ ರಮೇಶ ನಿರ್ದೇಶನ, ನಿರ್ಮಾಣ ಮಾಡಿದ ಗೋಲ್ಡನ್ ರೈನ್ ಮೂವೀಸ್ ಬ್ಯಾನರ್ ಅಡಿ ರೈತದ ಕುರಿತ ಶ್ರೀಮಂತ ಚಿತ್ರ ಬಿಡುಗಡೆಯಾಗಲಿದೆ. ಹೊಟ್ಟೆಗೆ ಅನ್ನ ಹಾಕುವ ರೈತರೇ ನಿಜವಾದ ಶ್ರೀಮಂತ. ಆತ ಕೊಡುಗೈದಾನಿ ಅತನೇ ನಿಜವಾದ ದಾನಿ. ಹಳ್ಳಿಯ ಸುಗ್ಗಿ, ಜಾತ್ರೆ, ಹಬ್ಬ,ಹಾಡು,ಹಸೆ, ಗ್ರಾಮೀಣ ಕಲೆಗಳ ಬಗ್ಗೆ ಚಿತ್ರಕಥೆ ಹೊಂದಿದೆ ಎಂದರು.
ಮುಂಬೈ ಬೆಡಗಿ ವೈಷ್ಣವಿ ಪಟವರ್ಧನ್, ವೈಷ್ಣವಿ ಚಂದ್ರನ್ ನಟಿಸಿದ್ದು ಕಲಬುರಗಿಯ ಕ್ರಾಂತಿ, ರಮೇಶ ಭಟ್,ರವಿಶಂಕರ್ ಗೌಡ, ಸಾದು ಕೋಕಿಲ, ಚರಣ್ ರಾಜ್,ಕಲ್ಯಾಣಿ, ಗಿರಿ, ರಾಜು ತಾಳಿಕೋಟೆ,ಬಸವರಾಜ ಹಾಸನ್ ಅಭಿನಯಿಸಿದ್ದಾರೆ.
ನಾದ ಭ್ರಹ್ಮ ಹಂಸಲೇಖ ಸಂಗೀತ ನಿರ್ದೇಶಕರಾಗಿದ್ದು ಎಸ್ ಪಿ ಬಿ ಅವರ ಕೊನೆಯ ಹಾಡು ಹಾಡಿದ್ದಾರೆ. ರವಿಕುಮಾರ್ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ, ಮಾಸ್ ಮಾದ ಸಹಾಸ, ಮಧನ್-ಹರಿಣಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಇದೊಂದು ಸಮುದಾಯಿಕ ಚಿತ್ರವಾಗಿದ್ದು ಬಹುಪಾಲು ನೈಜ ಲೋಕೇಶನ್ ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಟೀಸರ್ ಬಿಡುಗಡೆಯಾಗಿದೆ. ೮ ಹಾಡುಗಳಿದ್ದು ೫ ಬಿಡುಗಡೆಯಾಗಿದೆ. ಸಿನಿಮಾವನ್ನು ಹೊರತರಲು ಸಾಕಷ್ಟು ಪರಿಶ್ರಮ ಪಡೆದಿದ್ದು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಮಹೇಶ ಕೊಳ್ಳೆಗಾಲ, ರುಪ್ ಮಂಗಳ ಸೇರಿದಂತೆ ಇತರರು ಉಪಸ್ಥಿತರಿದ್ದರು.