ಏ. ೧೪ ರವರೆಗೆ ವಿಶೇಷ ರೈಲು ವ್ಯವಸ್ಥೆ

ಬೆಂಗಳೂರು, ಏ.೮-ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಿಭಾಗ ಇಂದಿನಿಂದ ಏಪ್ರಿಲ್ ೧೪ ರವರೆಗೆ ವಿಶೇಷ ರೈಲುಗಳು ಓಡಿಸಲಿದೆ.
ಮುಷ್ಕರ ಮುಂದುವರೆದಿರುವುದರಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಕಾರಣ ವಿಶೇಷ ರೈಲು ಸಂಚಾರ್ಕೆ ನಡೆಸಲು ನೈರುತ್ಯ ರೈಲ್ವೆ ವಲಯ ನಿರ್ಧರಿಸಿದೆ.
ಹುಬ್ಬಳ್ಳಿ – ಯಶವಂತಪುರ, ಯಶವಂತಪುರ – ವಿಜಯಪುರ, ಯಶವಂತಪುರ-ಹುಬ್ಬಳ್ಳಿ, ಮೈಸೂರು – ಬೀದರ್, ಬೀದರ್ -ಯಶವಂತಪುರ, ಕಾರವಾರ – ಯಶವಂತಪುರ, ಬೆಂಗಳೂರು-ಮೈಸೂರು ನಡುವೆ ೧೮ ವಿಶೇಷ ರೈಲುಗಳ ಓಡಾಟ ನಡೆಸಲಿವೆ.