ಏ. ೧೩ ವಿಶಾಖಪಟ್ಟಣದಲ್ಲಿ ಆಂಧ್ರಾಡಳಿತ

ಹೈದರಾಬಾದ್,ಜ.೫- ಆಂಧ್ರಪ್ರದೇಶದ ಸಂಪೂರ್ಣ ಆಡಳಿತವನ್ನು ವಿಶಾಖಪಟ್ಟಣಕ್ಕೆ ಬದಲಾಯಿಸಲು ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಮುಂದಾಗಿದ್ದು ತೆಲುಗು ಹೊಸ ವರ್ಷ ಏಪ್ರಿಲ್ ೧೩ ರಂದು ಕಾರ್ಯಾಚರಣೆ ಮಾಡುವ ಸಾದ್ಯತೆಗಳಿವೆ.
ತೆಲುಗು ಹೊಸ ವರ್ಷವಾದ ಯುಗಾದಿಯಂದು ವಿಶಾಖ ಪಟ್ಟಣದಿಂದ ಆಡಳಿತ ಆರಂಭವಾಗುವ ಸಾಧ್ಯತೆಗಳಿವೆ ಎಂದು ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಬೋತ್ಸಾ ಸತ್ಯನಾರಾಯಣ ತಿಳಿಸಿದ್ದಾರೆ.
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಮ್ಮತಿಸಿದರೆ ಯುಗಾದಿ ಹಬ್ಬದಿಂದ ವಿಶಾಖ ಪಟ್ಟಣದಲ್ಲಿ ಆಂಧ್ರಪ್ರದೇಶದ ಆಡಳಿತ ಕಾರ್ಯಾರಂಭ ಮಾಡಲಿದೆ.ಇಲ್ಲದಿದ್ದರೆ ಸೂಕ್ತ ದಿನಾಂಕ ನೋಡಿಕೊಂಡು ಆಡಳಿತ ಆರಂಭಿಸುವುದಾಗಿ ಅವರು ಹೇಳಿದ್ದಾರೆ.
ವಿಶಾಖಪಟ್ಟಣದಿಂದ ಆಡಳಿತ ನಡೆಸುವ ಸಂಬಂಧ ಎಲ್ಲಾ ಕಾನೂನಾತ್ಮಕ ತೊಡಕು ನಿವಾರಿಸಿಕೊಂಡು ಮುನ್ನೆಡೆಯುವುದಾಗಿ ತಿಳಿಸಿರುವ ಅವರು, ಆಂದ್ರಪ್ರದೇಶದ ಸಚಿವಾಲಯದ ಸಿಬ್ಬಂದಿ ವಿಶಾಖಪಟ್ಟಣಕ್ಕೆ ಸ್ಥಳಾಂತಗೊಳ್ಳಲು ಸಜ್ಜಾಗಿದ್ದಾರೆ ಎಂದು ಹೇಳಿದ್ದಾರೆ.
ವಿಶಾಖಪಟ್ಣದಿಂದ ಆಡಳಿತ ನಡೆಸುವ ಸಂಬಂಧ ಇನ್ನೂ ಯಾವುದೇ ಸರ್ಕಾರದ ಆದೇಶ ಹೊರಡಿಸಲಿಲ್ಲ ಆದರೆ ಈ ನಿಟ್ಟಿನಲ್ಲಿ ಪ್ರಯತ್ನ ,ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರ ಈ ಸಂಬಂಧ ಅಧಿಕೃತ ಆದೇಶ ಹೊರಡಿಸುತ್ತಿದ್ದಂತೆ ಸಚಿವಾಲಯದ ಸಿಬ್ಬಂಧಿ ವಿಶಾಖಪಟ್ಟಣಂಗೆ ಸ್ಥಳಾಂತರವಾಗಲು ಸಿದ್ದರಿದ್ದೇವೆ ಎಂದು ಸಚಿವಾಲಯದ ಸಂಘದ ಅಧ್ಯಕ್ಷ ಕೆ. ವೆಂಕಟರಾಮಿ ರೆಡ್ಡಿ ತಿಳಿಸಿದ್ದಾರೆ.
ಸರ್ಕಾರಿ ಅಧಿಕಾರಿಗಳು ವಿಶಾಖಪಟ್ಟಣಕ್ಕೆ ಸ್ಥಳಾಂತರವಾಗಲು ಎಲ್ಲಾ ಸಿದ್ದತೆ ನಡೆಸಲಾಗಿದೆ ಎಂದು ಸರ್ಕಾರಿ ನೌಕರರ ಮಕ್ಕಳು ಓದುತ್ತಿರುವ ಹಿನ್ನೆಲೆಯಲ್ಲಿ
೨೦೧೯ರ ಡಿಸೆಂಬರ್ ನಲ್ಲಿ ಮುಖ್ಯಮಂತ್ರಿ ಜಗನ್ ಮೋಗನ್ ರೆಡ್ಡಿ ಅವರು ಕಾರ್ಯಾಂಗ ರಾಜಧಾನಿಯನ್ನಾಗಿ ವಿಶಾಖ ಪಟ್ಟಣ, ನ್ಯಾಯಾಂಗ ರಾಜಧಾನಿಯಾಗಿ ಕರ್ನೂಲ್ ಮತ್ತು ರಾಜಧಾನಿಯನ್ನಾಗಿ ಅಮರಾವತಿಯನ್ನು ಉಳಿಸಿಕೊಳ್ಳಲು ಮುಸೂದೆ ತಂದಿದ್ದರು. ಇದಕ್ಕೆ ರಾಜ್ಯಪಾಲ ಬಿಶ್ವಬೂಷಣ್ ಹರಿಚಂದನ್ ಅಂಕಿತ ಹಾಕಿದ್ದರು.