ಏ.೧೧: ಶ್ರೀ ಸಾವಿರ ಮಹರ್ಷಿ ಜಯಂತೋತ್ಸವ

ರಾಯಚೂರು,ಏ.೪- ಶ್ರೀ ಸವಿತಾಪೀಠ ಮಹಾ ಸಂಸ್ಥಾನ ಮಠದಿಂದ ಏಪ್ರಿಲ್ ೧೧ ರಂದು ಶ್ರೀ ಸಾವಿರ ಮಹರ್ಷಿ ಜಯಂತೋತ್ಸವವನ್ನು ಹಮ್ಮಿಕೊಂಡಿದ್ದು,ಇದರ ಅಂಗವಾಗಿ ಗುರುವಂದನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀ ಸವಿತಾ ಪೀಠ ಮಹಾಸಂಸ್ಥಾನದ ಶ್ರೀ ಸವಿತಾನಂದನಾಥ ಮಹಾಸ್ವಾಮೀಜಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಶ್ರೀ ಕ್ಷೇತ್ರ, ಕೊಂಚೂರು ನಲ್ಲಿ ಬೆಳಿಗ್ಗೆ ೯-೩೦ ಕ್ಕೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿತ್ತಾಪುರ ಶ್ರೀ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು, ಶ್ರೀ ಕಟ್ಟಿಮನಿ ಹಿರೇಮಠ ಹಲಕಟ್ಟಾದ ಶ್ರೀ ಮುನಿಂದ್ರ ಶಿವಾಚಾರ್ಯರು,ಶ್ರೀ ಸಿದ್ದೇಶ್ವರ ದ್ಯಾನದಾನ ಶ್ರಮ ಹಲಕಟ್ಟಾ ರಾಜಶೇಖರ ಮಹಾಸ್ವಾಮಿಗಳು,ಸಿದ್ದಾರೂಡ ಮಠ ಯಳ ಸಂಗಿ ಶ್ರೀ ಪರಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ ಎಂದರು.
ಸವಿತಾ ರತ್ನ ಪ್ರಶಸ್ತಿಯನ್ನು ೫ ಜನರಿಗೆ ನೀಡಲಾಗುತ್ತಿದ್ದು,ಸಾವಿರ ಕಲಾರತ್ನ ಪ್ರಶಸ್ತಿಯನ್ನು ಕೂಡ ೫ ಜನರಿಗೆ ಕೊಡಲಾಗುತ್ತದೆ ಸವಿತಾ ಕಣ್ಮಣಿ ಪ್ರಶಸ್ತಿಯನ್ನು ದಿವಂಗತ ಅಶೋಕ ಗಸ್ತಿ ಸೇರಿ ೪ ಜನರಿಗೆ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ವಿಜಯ ಭಾಸ್ಕರ್ ,ಸುಮಾ ಗಸ್ತಿ ,ಗೋವಿಂದ, ವೆಂಕಟೇಶ, ಭಿಮೇಶ, ಅನಿಲಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.