‘ಏಸ್’ ಫಸ್ಟ್ ಲುಕ್ ಟೀಸರ್ ಬಿಡುಗಡೆ

ರುಕ್ಮಿಣಿ ವಸಂತ್ ಹಾಗೂ ವಿಜಯ್ ಸೇತುಪತಿ ನಟನೆಯ ‘ಏಸ್’ ಫಸ್ಟ್ ಲುಕ್ ಹಾಗೂ ಟೈಟಲ್ ಟೀಸರ್ ಅನಾವರಣವಾಗಿದೆ. ಜೂಜು, ಬಂದೂಕು, ಸ್ಫೋಟ, ದರೋಡೆ ಮತ್ತು ಬೈಕ್ ಚೇಸಿಂಗ್ ಅಂಶ ಒಳಗೊಂಡಿರುವ ಅನಿಮೇಟೆಡ್ ಸ್ವರೂಪದಲ್ಲಿ ಟೀಸರ್ ಅನಾವರಣಗೊಳ್ಳಿಸಲಾಗಿದೆ.

ವಿಜಯ್ ಸೇತುಪತಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ಕನ್ನಡತಿ ರುಕ್ಮಿಣಿ ವಸಂತ್ ಸಾಥ್ ಕೊಟ್ಟಿದ್ದಾರೆ.

ಏಸ್ ಸಿನಿಮಾದಲ್ಲಿ ಯೋಗಿ ಬಾಬು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಪಿ.ಎಸ್.ಅವಿನಾಶ್, ದಿವ್ಯಾ ಪಿಳ್ಳೈ, ಬಬ್ಲು, ರಾಜಕುಮಾರ್ ಮತ್ತು ಅನೇಕ ಪ್ರಮುಖ ನಟರು ತಾರಾಬಳಗದಲ್ಲಿದ್ದಾರೆ.

ಆರ್ಮುಗ ಕುಮಾರ್ ನಿರ್ದೇಶನದ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕರಣ್ ಬಹದ್ದೂರ್ ರಾವತ್ ಛಾಯಾಗ್ರಹಣ ಮತ್ತು ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜಿಸಿದ್ದು, ಗೋವಿಂದರಾಜ್ ಸಂಕಲನ ಒದಗಿಸಿದ್ದಾರೆ.

ಕ್ರೈಮ್ ಥ್ರಿಲ್ಲರ್ ಕಾಮಿಡಿ ಕಥಾಹಂದರ ಹೊಂದಿರುವ ಏಸ್ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದ್ದು ಚಿತ್ರ ಈ ವರ್ಷವೇ ಬಿಡುಗಡೆ ಆಗಲಿದೆ.