ಏಷ್ಯನ್ ಗೇಮ್ಸ್ ಲೈಟ್‌ವೇಟ್ ಡಬಲ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ

ಹ್ಯಾಂಗ್‌ಝೌ,ಸೆ.೨೪:ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಭೇಟೆ ಆರಂಭವಾಗಿದೆ. ಇಂದು ನಡೆದ ಪುರುಷರ ಲೈಟ್‌ವೇಟ್ ಡಬಲ್ಸ್ ಸ್ಕಲ್ ಫೈನಲ್ ಪಂದ್ಯದಲ್ಲಿ ಅರ್ಜುನ್‌ಲಾಲ್ ಜಾಥ್ ಮತ್ತು ಅರವಿಂದ್‌ಸಿಂಗ್ ಜೋಡಿ ಬೆಳ್ಳಿ ಪದಕ ಬಾಚಿಕೊಂಡಿದೆ.
ಈ ಇಬ್ಬರು ಕ್ರೀಡಾಪಟುಗಳು ೬.೨೮.೧೮ ನಿಮಿಷದಲ್ಲಿ ನಿಗದಿತ ಗುರಿ ತಲುಪಿ ೨ನೇ ಸ್ಥಾನ ಪಡೆದುಕೊಳ್ಳುವಲ್ಲಿ ಸಫಲರಾದರು.
ಚೀನಾದ ಫ್ಯಾಬ್‌ಜುಂಜಿ ಮತ್ತು ಸನ್‌ಮ್ಯಾನ್ ಜೋಡಿ ೬.೨೩ ೧೬ ನಿಮಿಷಗಳಲ್ಲಿ ಗುರಿ ತಲುಪಿ ಅಗ್ರಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿತು. ಇದೇ ವೇಳೆ ಮಹಿಳೆಯರ ೧೦ ಮೀ. ಏರ್‌ರೈಫಲ್ ತಂಡ ಬೆಳ್ಳಿ ಪದಕ ಪಡೆಯುವಲ್ಲಿ ಯಶಸ್ವಿಯಾಗಿದೆ. ಶೂmರ್‌ಗಳಾದ ರಮಿತಾ, ಮೆಹುಲಿಘೋಷ್ ಮತ್ತು ಆಶೀಚೌಕ್ಸೆ ೧೦ ಮೀ. ಏರ್‌ರೈಫಲ್ ಸ್ಪರ್ಧೆಯಲ್ಲಿ ವಿಜಯ ಸಾಧಿಸಿದ್ದಾರೆ.
ಬೆಳ್ಳಿ ಪದಕ ಪಡೆಯುವುದರ ಜತೆಗೆ ಐತಿಹಾಸಿಕ ದಾಖಲೆಯನ್ನು ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಭಾರತದ ಏರ್‌ರೈಫಲ್ ತಂಡ ಒಟ್ಟು ೧೮೮೪ ಅಂಕ ಗಳಿಸಿತು. ಚೀನಾ ೧೮೯೬.೬ ಅಂಕಗಳೊಂದಿಗೆ ಚಿನ್ನದ ಪದಕ ತೆಕ್ಕೆಗೆ ಹಾಕಿಕೊಂಡಿತು. ಮಂಗೋಲಿಯಾ ೧೮೮೦ ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಮತ್ತೊಂದೆಡೆ ರೋವಿಂಗ್ ಸ್ಪರ್ಧೆಯಲ್ಲಿ ಭಾರತದ ಬಾಬುಲಾಲ್‌ಯಧವ್ iತ್ತು ಲೆಕ್ರಮ್ ಜೋಡಿ ೩ನೇ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿಕೊಂಡಿತು.
ಇದೇ ವೇಳೆ, ಭಾರತದ ಮಹಿಳಾ ಕ್ರಿಕೆಟ್ ತಂಡ ಬಾಂಗ್ಲಾ ದೇಶವನ್ನು ೮ ವಿಕೆಟ್‌ಗಳಿಂದ ಮುಗಿಸಿ ಏಷ್ಯಾ ಕಪ್ ಕ್ರೀಡಾ ಕೂಟದಲ್ಲಿ ಫೈನಲ್ ತಲುಪಿದೆ.