ಏಷಿಯನ್ ಅಪಾರ್ಟ್‍ಮೆಂಟ್‍ನ ಮನೆ ಕಳವು1.45 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಿ ಪರಾರಿ

ಕಲಬುರಗಿ,ಮೇ.18-ಇಲ್ಲಿನ ಕುವೆಂಪು ನಗರದಲ್ಲಿರುವ ಏಷಿಯನ್ ಅಪಾರ್ಟ್‍ಮೆಂಟ್‍ನ ಮನೆಯೊಂದರ ಬೀಗ ಮುರಿದು 1.45 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಲಾಗಿದೆ.
ಸಂತೋಷ ಮೇತ್ರೆ ಎಂಬುವವರ ಮನೆ ಬೀಗ ಮುರಿದು ಅಲಮಾರಿಯಲ್ಲಿದ್ದ 1 ಲಕ್ಷ ರೂ.ಮೌಲ್ಯದ 50 ಗ್ರಾಂ.ಬಂಗಾರದ ಮಂಗಳಸೂತ್ರ ಮತ್ತು 45 ಸಾವಿರ ರೂ.ಮೌಲ್ಯದ 3 ಬಂಗಾರದ ಉಂಗುರ ಕಳವು ಮಾಡಲಾಗಿದೆ.
ಸಂತೋಷ ಮೇತ್ರೆ ಅವರು ಖಾಸಗಿ ಕೆಲಸದ ನಿಮಿತ್ಯ ಕುಟುಂಬ ಸಮೇತ ಮುಂಬೈಗೆ ಹೋದ ವೇಳೆ ಮನೆ ಕಳವು ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.