ಏಳು ದಶಕ ಕಳೆದರು ಶೋಷಿತರು ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ

(ಸಂಜೆವಾಣಿ ವಾರ್ತೆ)
ಶಹಾಪುರ:ನ.6:ಸಂವಿಧಾನ ಜಾರಿಯಾಗಿ 7 ದಶಕ ಕಳೆದರು ನ್ಯಾಯ, ಸಮಾನತೆ, ಸಹೋದರತೆ ಘೋಷಣೆಗಳಾಗಿ ಉಳಿದಿವೆ. ದೇಶದಲ್ಲಿ ಶೋಷಿತರು ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ದ.ಸಂ.ಸ (ಭೀಮವಾದ) ರಾಜ್ಯ ಸಂಘಟನಾ ಸಂಚಾಲಕರಾದ ಶಿವಕುಮಾರ್ ಜಿ ಕಳವಳ ವ್ಯಕ್ತಪಡಿಸಿದರು.
ನಗರದ ಟೌನ್ ಹಾಲ್ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಯಾದಗಿರಿ ಜಿಲ್ಲಾ ಸಮಿತಿ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ- ಕರ್ನಾಟಕ ವತಿಯಿಂದ ಕೋಮುವಾರು ತೀರ್ಪು ಹಾಗೂ ಪೂನಾ ಒಪ್ಪಂದ ಕುರಿತು ಒಂದು ದಿನದ ರಾಜ್ಯ ಮಟ್ಟದ ಅಧ್ಯಯನ ಶಿಬಿರದ ಮೊದಲ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಬೇಡ್ಕರವರ ಸತತ ಪ್ರಯತ್ನದಿಂದ ವಿಶೇಷ ಚುನಾಯಕ ಸೇರಿದಂತೆ ಹಲವು ಹಕ್ಕುಗಳನ್ನು ನೀಡಲಾಗಿತ್ತು. ಆದರೆ ಪೂನಾ ಒಪ್ಪಂದವು ಶೋಷಿತರು ಆ ಹಕ್ಕುಗಳ ವಂಚಿತರಾದರು. ಇದಕ್ಕೆಲ್ಲ ಮೂಲ ಕಾರಣ ಕೋಮುವಾವಿಗಳ ಕುತಂತ್ರ ನೀತಿ ಎಂದು ಹೇಳಿದರು.
ನಂತರ ಎರಡನೇ ಗೋಷ್ಠಿಯಲ್ಲಿ ಸ.ಪ.ಪೂ ಕಾಲೇಜು ಮಸರಕಲ್ ಪ್ರಾಂಶುಪಾಲರಾದ ಸಿದ್ದಣ್ಣ ಪರಮೇಶ್ವರ್ ಮಾತನಾಡಿ, ಶಿಕ್ಷಣದಿಂದ ದೇಶ ಬದಲಾವಣೆಯಾಗಲು ಸಾಧ್ಯ. ಅಂಬೇಡ್ಕರ್ ವಿಧ್ಯೆ ಪಡೆಯದಿದ್ದರೆ ಭಾರತದ ಎಲ್ಲರಿಗೂ ಸಮಾನ ನ್ಯಾಯ ಒದಗಿಸುವ ಸಂವಿಧಾನ ನೀಡಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಯುವ ಜನತೆ ಉತ್ತಮ ಶಿಕ್ಷಣ ಪಡೆದು ಸಮುದಾಯವನ್ನು ಎಚ್ಚರಗೋಳಿಸುವ ಜೊತೆಗೆ ಪ್ರಜ್ಞಾವಂತ ಸಮಾಜವನ್ನು ರೂಪಿಸಬೇಕಿದೆ. ಪ್ರಸ್ತುತ ದೇಶದಲ್ಲಿ ನಷ್ಟವೆಂಬ ನೆಪದಲ್ಲಿ ಹಲವು ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಿ ಕೋಟ್ಯಾಂತರ ಯುವಕರಿಗೆ ಸರ್ಕಾರಿ ಕೆಲಸ ಸಿಗದಂತೆ ಹುನ್ನಾರ ನಡೆದಿದೆ. ಸದ್ಯದ ರಾಜಕೀಯ ನಾಯಕರು ಸ್ಥಾನಕ್ಕಾಗಿ ಬಾಬಾ ಸಾಹೇಬರ ವಿಚಾರ ಬಲಿಕೊಡುವುದು ಸಲ್ಲದು. ಇತ್ತ ನೌಕರಸ್ತರು ಸಮುದಾಯದ ಬದಲಾವಣೆಯತ್ತ ಗಮನಹರಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶ್ವನಾಥರೆಡ್ಡಿ ದರ್ಶನಾಪುರ, ಈರಣ್ಣ ಕಸನ್, ಡಾ. ಭೀಮರಾಯ ಅಂಚೆಸುಗೂರು, ಮಾನಪ್ಪ ಜೇಗ್ರಿ, ಶಿವು ದೋರನಹಳ್ಳಿ, ಹುಸೆನಪ್ಪ ಹಂಚನಾಳ, ಶರಣು ದೋರನಹಳ್ಳಿ, ಚಂದ್ರಶೇಖರ ದೊಡ್ಡಮನಿ, ರವೀಂದ್ರನಾಥ ಹೊಸ್ಮನಿ ಸೇರಿದಂತೆ ಹಲವು ಉಪಸ್ಥಿತರಿದ್ದರು.
ವಿರೇಶ್ ಕೊಂಕಲ್, ಲಕ್ಷಣ ಹಳಿಸಗರ, ಶೇಖರ್ ಬಡಿಗೇರ್ ಸ್ವಾಗತಿಸಿದರು. ಪರಶುರಾಮ ಕಾಂಬ್ಳೆ, ಬಲಭೀಮ ಬೇವಿನಹಳ್ಳಿ, ವಿಶ್ವ ನಾಟೇಕರ್ ನಿರೂಪಿಸಿದರು. ರಾಜು ಚಂದಾಪುರ, ಮಂಜು ಚಲುವಾದಿ, ಮಾಳಪ್ಪ ಮಡ್ನಾಳ ವಂದಿಸಿದರು.
ಇದೇ ಸಂಧರ್ಭದಲ್ಲಿ ಸಿದ್ದು ಹಳಿಸಗರ, ಮಲ್ಲಿಕಾರ್ಜುನ ಬಂಡೆ, ಪ್ರೇಮಾ ನಾಟೇಕರ್, ಅಯ್ಯಪ್ಪ ಗೊಂದೆನೂರ ಸೇರಿದಂತೆ ಸಂಘಟನೇಯ ನೂರಾರು ಕಾರ್ಯಕರ್ತರು ಇದ್ದರು.