ಏಳು ಆದರ್ಶ ಶಿಕ್ಷಕರ ಆಯ್ಕೆ

ಕಲಬುರಗಿ. ಸೆ. 19- ಸಮಗ್ರ ಉಪಾಧ್ಯಾಯರ ಪ್ರಗತಿಪರ ಸಂಘದ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಕೊಡಮಾಡುವ ಆದರ್ಶ ಉಪಾಧ್ಯಾಯ ಪ್ರಶಸ್ತಿಗೆ ಕಲಬುರಗಿ ತಾಲೂಕಿನ ದಕ್ಷಿಣ ವಲಯದ ಏಳು ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ದಕ್ಷಿಣ ವಲಯದ ಅಧ್ಯಕ್ಷೆ ನಂದಿನಿ ಸನಬಾಲ್ ತಿಳಿಸಿದ್ದಾರೆ.
ಶೀಲಾ ಕುಲಕರ್ಣಿ ( ಅಂಗನವಾಡಿ ಕಾರ್ಯಕರ್ತೆ), ಕಲ್ಯಾಣರಾವ್ ಆರ್. ಬಿರಾದಾರ್ (ಪ್ರಾಥಮಿಕ ಶಾಲೆ) , ಸುಬ್ಬರಾಯಪ್ಪ ಜಿ. ಎನ್ ( ಬಿ. ಆರ್. ಪಿ), ಸುನಂದಾ ಚೌಧರಿ ( ಮಾದರಿ ಶಾಲೆ), ರವೀಂದ್ರ ಸಜ್ಜೆ ( ಉಪನ್ಯಾಸಕರು), ಡಾ. ವಿದ್ಯಾ ಡಿ. ( ಸಹ ಪಾಧ್ಯಾಪಕರು) ಹಾಗೂ (ಪುಂಡಲೀಕ ಬಲವಂತಪ್ಪ – ಪೆÇಲೀಸ್ ಇಲಾಖೆ) ಆಯ್ಕೆಯಾಗಿದ್ದಾರೆ.
ಸೆ. 24ರಂದು ಬೆಳಿಗ್ಗೆ 10.27ಕ್ಕೆ ಕಲಬುರಗಿ ಗೀತಾ ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ನಂದಿನಿ ಅವರು ಕೋರಿದ್ದಾರೆ.